Friday, June 2, 2023

Latest Posts

ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸಿ: ಚುನಾವಣಾ ಪ್ರಚಾರದಲ್ಲಿ ಯಡಿಯೂರಪ್ಪ ಕರೆ

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದಲ್ಲಿ ಗ್ರಾಮೀಣ ಭಾಗದ ಅಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಜೇವಗಿ೯ಯ ಯಡ್ರಾಮಿ ಪಟ್ಟಣದ ಸರ್ದಾರ ಶರಣಗೌಡ ವೃತ್ತದ ಹತ್ತಿರ ಶುಕ್ರವಾರದಂದು ಬಿಜೆಪಿ ಅಭ್ಯರ್ಥಿ ಶಿವರಾಜ ಪಾಟೀಲ ರದ್ದೇವಾಡಗಿ ಪರ ನಡೆದ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಮೂಲಭೂತ ಸೌಕರ್ಯ, ರೈತರ, ಬಡವರ, ಮಹಿಳೆಯರ ಅಭಿವೃದ್ದಿಗೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದ ಅವರು, ಪಕ್ಷದ ಅಭ್ಯರ್ಥಿ ಶಿವರಾಜ ಪಾಟೀಲ ರದ್ದೇವಾಡಗಿ ಅವರನ್ನು ಬಹುಮತದಿಂದ ಆರಿಸಿ ತರಬೇಕು ಎಂದು ಮನವಿ ಮಾಡಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಕುರಿ ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡಮನಿ ಮುಖಂಡರಾದ ಮಲ್ಲಿನಾಥಗೌಡ ಪಾಟೀಲ ಯಲಗೋಡ, ಹಳ್ಳೆಪ್ಪಾಚಾರ್ಯ ಜೋಷಿ, ಎಂ.ಬಿ.ಪಾಟೀಲ ಹರವಾಳ, ಭೀಮರಾಯ ಗುಜಗುಂಡ, ರೇವಣಸಿದ್ದಪ್ಪ ಸಂಕಾಲಿ, ಶೋಭಾ ಬಾಣ , ಲಿಂಗನಗೌಡ ಪೋಲಿಸ ಪಾಟೀಲ, ನಿಂಗನಗೌಡ ಆರ್.ಪಾಟೀಲ, ದೇವಿಂದ್ರಪ್ಪಗೌಡ ಸರ್ಕಾರ, ಮಲ್ಲಿಕಾರ್ಜುನ ಕುಸ್ತಿ, ಅಯ್ಯಣ್ಣ ದೇಸಾಯಿ, ರಾಜಶೇಖರ ಗೌನಳ್ಳಿ, ಅಣ್ಣಯ್ಯ ಹಿರೇಮಠ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!