ಬ್ರೇಕ್ ವೈಫಲ್ಯ ಆಗಿ ಹಳ್ಳಕ್ಕೆ ಬಿದ್ದ ಟೆಂಪೋ: 16 ಮಂದಿಗೆ ಗಾಯ

ಹೊಸದಿಗಂತ ವರದಿ, ಮಳವಳ್ಳಿ:

ಪ್ರವಾಸಕ್ಕೆಂದು ಬಂದಿದ್ದ ಟೆಂಪೋ ಬ್ರೇಕ್ ವೈಫಲ್ಯದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು 16 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಹಲಗೂರು ಸಮೀಪದ ಕೆಸರಕ್ಕಿಹಳ್ಳದ ತಿರುವಿನಲ್ಲಿ ನಡೆದಿದೆ.

ಮೂಲತಃ ಬೆಂಗಳೂರಿನ ಒಂದೇ ಕುಟುಂಬದವರು ಟೆಂಪೋ ಮಾಡಿಕೊಂಡು ಬೆಂಗಳೂರು ನಿಂದ ತಲಕಾಡು, ಗಗನಚುಕ್ಕಿ ಭರಚುಕ್ಕಿ, ಶಿವನಸಮುದ್ರ ಮುಗಿಸಿ ಮುತ್ತತ್ತಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಟೆಂಪೋ ಬ್ರೇಕ್ ಫೇಲಾದ ಪರಿಣಾಮ ಚಾಲಕ ವಾಹನವನ್ನು ಎಡಭಾಗಕ್ಕೆ ಎಳೆದ ಪರಿಣಾಮ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಬಲ ಭಾಗಕ್ಕೆ ತಿರುಗಿದರೆ ಪ್ರತಾಪಕ್ಕೆ ಹೋಗುತ್ತಿತ್ತು ಎಂದು ಗಾಯಾಳು ತಿಳಿಸಿದ್ದಾರೆ.
ಮಧುಗಿರಿ ಪಕ್ಕದ ಅರಳಕೊಪ್ಪ ಗ್ರಾಮದವರು ಬೆಂಗಳೂರಿನಲ್ಲಿ ವಾಸವಾಗಿದ್ದು ಒಂದೇ ಕುಟುಂಬದವರು ವಿವಿಧ ಪ್ರವಾಸಿ ಸ್ಥಳಗಳಿಗೆ ಹೋಗಿ ವಾಪಸ್ಸು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಘಟನೆಯ ವಿಷಯ ತಿಳಿದ ಹಲಗೂರು ಪಿಎಸ್‌ಐ ಬಿ.ಮಹೇಂದ್ರ ತಮ್ಮಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗೊಂಡವರನ್ನು ಮಳವಳ್ಳಿ ತಾಲೋಕು ಆಸ್ಪತ್ರೆ ಮತ್ತು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!