ಭೀಕರ ರಸ್ತೆ ಅಪಘಾತ: ತಮಿಳು ನಟಿ ಅರುಂಧತಿ ನಾಯರ್‌ಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಹಾಗೂ ಮಲಯಾಳಂ ನಟಿ ಅರುಂಧತಿ ನಾಯರ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೇರಳದ ಕೊವಲಂ ಬೈಪಾಸ್ ಬಳಿ ತಮ್ಮ ಸಹೋದರದ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಅರುಂಧತಿ ತಲೆಗೆ ತೀವ್ರವಾಗಿ ಏಟಾಗಿದೆ ಎಂದು ಅವರ ಸಹೋದರಿ ಮಾಹಿತಿ ನೀಡಿದ್ದಾರೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅರುಂಧತಿ ಸಹೋದರಿ ಪೋಸ್ಟ್ ಮಾಡಿದ್ದಾರೆ.

ಅರುಂಧತಿ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!