Friday, September 30, 2022

Latest Posts

ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ಗೆ ಭಯೋತ್ಪಾದಕರಿಂದ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾಜಿ ರಾಜ್ಯಸಭಾ ಸಂಸದ ಹಾಗೂ ಕಾಂಗ್ರೆಸ್‌ ನ ಮಾಜಿಮುಖಂಡ ಗುಲಾಂ ನಬಿ ಆಜಾದ್‌ ಅವರ ಮಿಷನ್ ಕಾಶ್ಮೀರದ ಭಾಗವಾಗಿ ಕಾಶ್ಮೀರ ಕಣಿವೆಯಲ್ಲಿ ನಿಗದಿತ ರ್ಯಾಲಿಗಳಿಗೆ ಮುಂಚಿತವಾಗಿ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿರುವ ರೆಸಿಸ್ಟೆನ್ಸ್ ಫ್ರಂಟ್ ಭಯೋತ್ಪಾದಕ ಸಂಘಟನೆಯು ಗುಲಾಂ ನಬಿ ಆಜಾದ್‌ಗೆ ಬೆದರಿಕೆ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಪೋಸ್ಟರ್‌ಗಳನ್ನೂ ಹಾಕಲಾಗಿದೆ.

“ದೇಶದ್ರೋಹಿಗಳ ಹೃದಯದಲ್ಲಿ ನಿಷ್ಠೆ ಇಲ್ಲ, ನಂಬಲರ್ಹವಾಗಿ ಕಾಣಿಸಿಕೊಳ್ಳುವ ಸುಳ್ಳು ನಾಟಕವಾಡುತ್ತಿದ್ದಾರೆ” ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದ್ದು, ಆಜಾದ್ ಅವರನ್ನು ‘ರಾಜಕೀಯ ಗೋಸುಂಬೆ’ ಎಂದು ದೂಷಿಸಲಾಗಿದೆ.

ಕಾಶ್ಮೀರದ ರಾಜಕೀಯದಲ್ಲಿ ಆಜಾದ್ ಅವರ ಆಸಕ್ತಿಯು ಪೂರ್ವ ಯೋಜಿತವಾಗಿದೆ. ಅವರು ಈ ಮೊದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು ಎಂದು ಪೋಸ್ಟರ್ ಹೇಳಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!