5 ರೂಪಾಯಿಗಾಗಿ ಬಸ್ ಕಂಡಕ್ಟರ್‌ಗೆ ಹಿಗ್ಗಾಮುಗ್ಗ ಥಳಿತ: ವೈರಲ್ ಆದ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರ್ಕಾರಿ ಬಸ್ ಕಂಡಕ್ಟರ್ ಒಬ್ಬ ಪ್ರಯಾಣಿಕನಿಂದ 5 ರೂ. ಹೆಚ್ಚುವರಿ ವಸೂಲಿ ಮಾಡಿದ್ದಕ್ಕೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಭೋಪಾಲ್ ನಲ್ಲಿರುವ ಪೊಲೀಸ್ ಹೆಡ್ ಕ್ವಾರ್ಟರ್ಸ್ ಬಸ್ ಸ್ಟಾಪ್ ನಲ್ಲಿ ಎನ್‌ಸಿಸಿ ಸಮವಸ್ತ್ರ ಧರಿಸಿದವ ಬಸ್ ಹತ್ತಿದ್ದಾನೆ. ಆತ ಇಳಿಯಬೇಕಾದ ಸ್ಟಾಪ್‌ಗೆ ಕೇವಲ 10 ರೂಪಾಯಿ ಟಿಕೆಟ್. ಆದರೆ ಕಂಡಕ್ಟರ್ 15 ರೂಪಾಯಿ ಟಿಕೆಟ್ ನೀಡಿದ್ದಾರೆಂದು ವರದಿಯಾಗಿದೆ.

ಆತ ತನ್ನ 5 ರೂ.ಗಳನ್ನು ವಾಪಸ್ ನೀಡುವಂತೆ ಕೇಳಿದ್ದಾನೆ. ಆದರೆ, ವಾಪಸ್‌ ನೀಡದ ಕಂಡರ್‌ ಹಾಗೂ ಬಾಲಕನ ನಡುವೆ ವಾಗ್ವಾದ ನಡೆದಿದೆ.  ಕಂಡಕ್ಟರ್ ವರ್ತನೆಯಿಂದ ಕೋಪಗೊಂಡ ಬಾಲಕ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಅಧಿಕಾರಿಗಳು ಕಂಡಕ್ಟರ್ ಗಳಿಗೆ ಟಾರ್ಗೆಟ್ ಹಾಕುತ್ತಿರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ದರದ ಟಿಕೆಟ್ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರ್‌ಟಿಸಿಯಿಂದ ದೂರು ಸ್ವೀಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!