ಕಾಸರಗೋಡಿನ ರೆಸಾಟ್೯ನಲ್ಲಿ ಕಳವು ಪ್ರಕರಣದ ಆರೋಪಿಗಳು ಚಿತ್ರದುರ್ಗದಲ್ಲಿ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಸರಗೋಡು ಜಿಲ್ಲೆಯ ಬೇಕಲ ರೆಸಾರ್ಟ್‌ನಿಂದ ಲಕ್ಷಾಂತರ ರೂ. ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಅರೋಪಿಗಳನ್ನು ಚಿತ್ರದುರ್ಗದಲ್ಲಿ ಬೇಕಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ರೆಸಾರ್ಟ್ ಸಿಬಂದಿಗಳಾಗಿದ್ದು, ಚಿತ್ರದುರ್ಗದ ಪ್ರದೀಪ್ ( 25) ಮತ್ತು ಪತ್ನಿ ನಿವೇದಿತಾ ( 24) ಎಂದು ಗುರುತಿಸಲಾಗಿದೆ.

ಬೇಕಲ ಕಾಫಿಲ್ ಬೀಚ್ ರಸ್ತೆಯ ಬೇಕಲ ಹೋಂ ಸ್ಟೇ ರೆಸಾರ್ಟ್‌ನಿಂದ ಆರೋಪಿಗಳು ನಗದು ಕಳವುಗೈದಿದ್ದರು. ರಿಸೆಪ್ಷನ್ ಕೊಠಡಿಯ ಕಪಾಟಿನಲ್ಲಿರಿಸಲಾಗಿದ್ದ ನಗದು ಕಾಣೆಯಾಗಿರುವ ಬಗ್ಗೆ ಬೇಕಲ ಠಾಣಾ ಪೊಲೀಸರಿಗೆ ರೆಸಾರ್ಟ್ ಮಾಲಕರು ದೂರು ನೀಡಿದ್ದರು.

ತನಿಖೆ ಕೈಗೆತ್ತಿಕೊಂಡ ಬೇಕಲ ಪೊಲೀಸರು ಚಿತ್ರದುರ್ಗದಲ್ಲಿ‌ಅರೋಪಿಗಳನ್ನು ಬಂಧಿಸಿದ್ದಾರೆ. ಕಳವುಗೈದ ಆರು ಲಕ್ಷ ರೂ.ಗಳಲ್ಲಿ ಆರೋಪಿಗಳು 2. 10 ಲಕ್ಷ ರೂ. ನೀಡಿ ಒಂದು ಹೊಸ ಬೈಕ್ ಹಾಗೂ ಎರಡು ಮೊಬೈಲ್ ಫೋನ್‌ನ್ನು ಖರೀದಿಸಿದ್ದರು. ಪೊಲೀಸರು ಇವುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!