ಮದುವೆಯಾಗಲು ನಿರಾಕರಿಸಿದ ಮಹಿಳೆಯ ಮನೆಗೆ ಬೆಂಕಿ ಇಟ್ಟ ಆರೋಪಿ ಅರೆಸ್ಟ್

ಹೊಸದಿಗಂತ ವರದಿ,ಬೆಂಗಳೂರು:

ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಪೀಡಿಸಿ, ಮಹಿಳೆ ನಿರಾಕರಿಸಿದ್ದಕ್ಕೆ ಆಕೆಯ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿ ನಿವಾಸಿ ಅಬಾರ್ಜ್(೨೪) ಬಂಧಿತ. ಆರೋಪಿ ಹಾಗೂ ದೂರುದಾರ ವಿವಾಹಿತ ಮಹಿಳೆ ದೂರದ ಸಂಬಂಯಾಗಿದ್ದು, ಮಹಿಳೆಯು ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಸಾರಾಯಿಪಾಳ್ಯದಲ್ಲಿ ವಾಸವಾಗಿದ್ದಾರೆ. ಆರೋಪಿ ಕೆಲ ತಿಂಗಳಿಂದ ಪತಿಯಿಂದ ವಿಚ್ಛೇಧನ ಪಡೆದುಕೊಂಡು ತನ್ನೊಂದಿಗೆ ಮದುವೆಯಾಗುವಂತೆ ಮಹಿಳೆಗೆ ಪೀಡಿಸುತ್ತಿದ್ದ. ಈ ವಿಚಾರವನ್ನು ತನ್ನ ಗಂಡನಿಗೂ ಮಹಿಳೆ ತಿಳಿಸಿದ್ದರು. ಹೀಗಾಗಿ ಹಿರಿಯರ ಸಮ್ಮುಖದಲ್ಲಿ ಮಹಿಳೆಗೆ ಮತ್ತೊಮ್ಮೆ ತೊಂದರೆ ಕೊಡದಂತೆ ಎಚ್ಚರಿಕೆಯೂ ನೀಡಲಾಗಿತ್ತು. ಆದರೂ ಕೆಲ ದಿನಗಳವರೆಗೂ ಸುಮ್ಮನಿದ್ದು ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಾನೆ.

ನಂತರ ಏ.೧೧ರ ಬೆಳಗಿನ ಜಾವದಲ್ಲಿ ಟೈಲರಿಂಗ್ ಅಂಗಡಿಯಲ್ಲಿದ್ದ ತನ್ನ ಪತಿಯೊಂದಿಗೆ ಮಾತನಾಡುತ್ತಾ ಹೊರಗೆ ಕುಳಿತಿದ್ದ ಸಮಯದಲ್ಲಿ ಮುಂಜಾನೆ ೪ ಗಂಟೆ ಸುಮಾರಿಗೆ ಮನೆ ಸಮೀಪದ ವ್ಯಕ್ತಿಯೊಬ್ಬರು ನಿಮ್ಮ ಮನೆಗೆ ಬೆಂಕಿ ಬಿದ್ದಿದ್ದೆ ಎಂದು ಕರೆ ಮಾಡಿದ್ದಾರೆ. ಗಾಬರಿಕೊಂಡು ಹೋಗಿ ನೋಡಿದಾಗ, ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಸೇರಿ ಎಲ್ಲವೂ ಸುಟ್ಟು ಕರಕಲಾಗಿತ್ತು. ಈ ನಡುವೆ ಆರೋಪಿ ಅರ್ಬಾಜ್, ದೂರುದಾರ ಮಹಿಳೆಯ ಪತಿಗೆ ಕರೆ ಮಾಡಿ ಮನೆಗೆ ಬೆಂಕಿ ಹಚ್ಚಿದ್ದೇನೆ ಎಂದು ತಿಳಿಸಿ ಕರೆ ಸ್ಥಗಿತಗೊಳಿಸಿದ್ದ. ಆದರೂ ದೂರುದಾರ ಮಹಿಳೆ ಮತ್ತು ಆಕೆಯ ಪತಿಯು ಆರೋಪಿ ಅರ್ಬಾಜ್ ಮೇಲೆ ದೂರು ನೀಡಿರಲಿಲ್ಲ. ನಂತರ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅರ್ಬಾಜ್ ವಿರುದ್ಧ ದೂರು ನೀಡಲಾಗಿದೆ. ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯು ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!