ಸಾವರ್ಕರ್​ ಚಿತ್ರದಲ್ಲಿ ನಟಿಸುವೆ ಆದ್ರೆ ಸಂಭಾವನೆ ಬೇಡ ಎಂದಿದ್ದ ನಟಿ: ಕುತೂಹಲ ವಿಷಯ ರಿವೀಲ್ ಮಾಡಿದ ನಿರ್ಮಾಪಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ರಣದೀಪ್ ಹೂಡಾ ಅಭಿನಯದ ‘ಸ್ವತಂತ್ರ ವೀರ್ ಸಾವರ್ಕರ್’ ಚಿತ್ರದ (Swatantra Veer Savarkar) ಸಿನಿಮಾ ಮಾರ್ಚ್ 22ರಂದು ಥಿಯೇಟರ್​ನಲ್ಲಿ ಬಿಡುಗಡೆ ಆಯಿತು. ಈ ಚಿತ್ರದಲ್ಲಿ ರಣದೀಪ್ ಹೂಡಾ ಜೊತೆಗೆ ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಣದೀಪ್ ಹೂಡಾ ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದ ಜೊತೆಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ನಿರ್ದೇಶನಕ್ಕೂ ಅವರು ಕಾಲಿಟ್ಟಿದ್ದಾರೆ.

ಇನ್ನು ಚಿತ್ರದಲ್ಲಿ ರಣದೀಪ್ ಎದುರು ಅಂಕಿತಾ ಲೋಖಂಡೆ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರವನ್ನು ಆನಂದ್ ಪಂಡಿತ್ ಮತ್ತು ಸಂದೀಪ್ ಸಿಂಗ್ ನಿರ್ಮಿಸಿದ್ದಾರೆ.

ಇದೀಗ ಚಿತ್ರದ ಕುರಿತು ಕುತೂಹಲದ ವಿಷಯವೊಂದು ರಿವೀಲ್ ಆಗಿದೆ. ಅದೇನೆಂದರೆ, ಸಾವರ್ಕರ್ ಅವರ ಪತ್ನಿ ಯಮುನಾ ಬಾಯಿ ಪಾತ್ರವನ್ನು ನಿರ್ವಹಿಸಿರುವ ʻಹಿಂದಿ ಬಿಗ್‌ ಬಾಸ್‌ ಸೀಸನ್‌ 17ʼರ ಖ್ಯಾತಿಯ ಅಂಕಿತಾ ಲೋಖಂಡೆ ಈ ಚಿತ್ರಕ್ಕಾಗಿ ಸಂಭಾವನೆ ಪಡೆದುಕೊಂಡಿಲ್ಲ .

ಈ ಕುರಿತು ನಿರ್ಮಾಪಕ ಸಂದೀಪ್ ಸಿಂಗ್ ಮಾಹಿತಿ ನೀಡಿದ್ದು, ಚಿತ್ರಕ್ಕೆ ಸಹಿ ಹಾಕುವ ಮೊದಲು ಅಂಕಿತಾ ಲೋಖಂಡೆ ಒಂದೇ ಒಂದು ಷರತ್ತು ಹಾಕಿದ್ದರು. ಈ ಚಿತ್ರಕ್ಕಾಗಿ ತಾವು ಹಣ ತೆಗೆದುಕೊಳ್ಳುವುದಿಲ್ಲ ಎಂದು. ಅದರಂತೆಯೇ ಅವರು ನಡೆದುಕೊಂಡಿದ್ದಾರೆ ಎಂದು ಸಂದೀಪ್​ ಹೇಳಿದ್ದಾರೆ.

ಈ ಚಿತ್ರಕ್ಕಾಗಿ ರಣದೀಪ್ ಅವರು ಬಾಡಿ ಟ್ರಾನ್ಸ್​ಫಾರ್ಮೆಷನ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದಲ್ಲಿ ಸಾವರ್ಕರ್ ಪಾತ್ರವನ್ನು ನಿರ್ವಹಿಸಲು, ರಣದೀಪ್ 26 ಕೆಜಿಯನ್ನು ಕಳೆದುಕೊಂಡರು. ಸಾವರ್ಕರ್ ಮೇಲಿನ ಗೌರವಕ್ಕಾಗಿ ಈ ರೀತಿ ಬದಲಾವಣೆ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದರು.

ಈ ಹಿಂದೆ ಕೆಲವೊಂದು ಚಿತ್ರಗಳಲ್ಲಿ ನಾನು ಸಹ-ನಿರ್ಮಾಣ ಮಾಡುತ್ತಿದ್ದಾಗ ಅಂಕಿತಾ ಮತ್ತು ಕಂಗನಾ ಇಬ್ಬರೂ ಸದ ನೀವು ನಿರ್ದೇಶಕರಾಗಬೇಕು ಎಂದು ಹೇಳುತ್ತಲೇ ಇದ್ದರು. ನೀವು ಯಾವಾಗ ಸಿನಿಮಾ ಮಾಡಿದರೂ ನಾನು ಅದರಲ್ಲಿ ನಟಿಸುತ್ತೇನೆ ಎಂದ ಅಂಕಿತಾ ಈ ಮುಂಚೆ ಹೇಳಿದ್ದರು. ‘ಸಫೇದ್’ ಚಿತ್ರದ ಸಮಯದಲ್ಲಿ, ಅಂಕಿತಾಗೆ ಬೇರೆ ಅಸೈನ್​ಮೆಂಟ್​ ಇದ್ದುದರಿಂದ ಸಾಧ್ಯವಾಗಿರಲಿಲ್ಲ. ನಂತರ, ಸಾವರ್ಕರ್ ಪತ್ನಿ ಯಮುನಾ ಬಾಯಿ ಪಾತ್ರಕ್ಕೆ ಒಪ್ಪಿಕೊಂಡರು. ಆದರೆ ಸಂಭಾವನೆ ಬೇಡ ಎಂದು ಹೇಳಿದ್ದರು. ಅದರಂತೆಯೇ ನಡೆದುಕೊಂಡಿದ್ದಾರೆ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ.

ಅಂದಹಾಗೆ ‘ಸ್ವತಂತ್ರ ವೀರ್ ಸಾವರ್ಕರ್’ 4 ದಿನಗಳಲ್ಲಿ 8.25 ಕೋಟಿ ಕಲೆಕ್ಷನ್ ಮಾಡಿದೆ. ರಣದೀಪ್ ಹೂಡಾ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಅಮಿತ್ ಸಿಯಾಲ್, ರಾಜೇಶ್ ಖೇರಾ, ಲೋಕೇಶ್ ಮಿತ್ತಲ್, ಬ್ರಜೇಶ್ ಝಾ, ಸಂತೋಷ್ ಓಜಾ, ರಾಹುಲ್ ಕುಲಕರ್ಣಿ ಮತ್ತು ಮೃಣಾಲ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!