ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಯರ್ ಬಾಟಲ್ ಮೇಲೆ 50 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದ್ದಕ್ಕೆ ದುಃಖದಲ್ಲಿ ಮದ್ಯಪ್ರಿಯನೊಬ್ಬ ಮರ ಏರಿ ಕುಳಿತಿದ್ದಾನೆ.
ಮಧ್ಯಪ್ರದೇಶದ ರಾಜ್ಗಢ್ ಜಿಲ್ಲೆಯ ನಿವಾಸಿ ಬ್ರಿಜ್ ಮೋಹನ್ ಶಿವಹರೆ ಮರ ಏರಿ ಕುಳಿತ ವ್ಯಕ್ತಿ.
ದುಡ್ಡು ಹೆಚ್ಚಾಯ್ತು ಎಂದು ಈ ವ್ಯಕ್ತಿ ಎಲ್ಲರಿಗೂ ದೂರು ನೀಡಿದ್ದಾನೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಬೇಸತ್ತು ಮರ ಏರಿದ್ದಾನೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾನೆ.
ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹರಸಾಹಸ ಮಾಡಿ ವ್ಯಕ್ತಿಯನ್ನು ಕೆಳಗಿಳಿಸಿದ್ದಾರೆ. ಠಾಣೆಯಲ್ಲಿ ಆತ ತನಗೆ ತುಂಬಾ ಕಷ್ಟ ಇದೆ, ಎರಡು ತಿಂಗಳಿಂದ ಕೆಲಸ ಸಿಕ್ಕಿಲ್ಲ, ಮನೆ ಬಾಡಿಗೆ ಕಟ್ಟಿಲ್ಲ.ಸರ್ಕಾರ ನೋಡಿದ್ರೆ ಬೀರ್ ದುಡ್ಡು ಜಾಸ್ತಿ ಮಾಡ್ತಿದೆ ನಾವೆಲ್ಲಿಗೆ ಹೋಗೋಣ ಎಂದು ಅತ್ತಿದ್ದಾನೆ.
MP | Offbeat | Suicide for Liquor |
चाहें टैक्स बढ़े, या रेट, कभी शिकायत ना करने वाली कौम सबसे शांतिप्रिय कौम (दारू पीने वालों की) भी आज प्रदर्शनरत हैं।
राजगढ़ ज़िले के बृजमोहन शिवहरे ने MP मानव अधिकार आयोग को ₹100 के क्वार्टर पर ₹20 एक्स्ट्रा और बियर पर ₹30 एक्स्ट्रा वसूलने… pic.twitter.com/FL3YK9pTGl
— काश/if Kakvi (@KashifKakvi) March 18, 2024