ಬಾಕ್ಸ್‌ ಆಫೀಸ್‌ನಲ್ಲೇ ಇತಿಹಾಸ ಬರೆದ ‘ಕೆಜಿಎಫ್ ಚಾಪ್ಟರ್ 2’

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗುರುವಾರ ಬಿಡುಗಡೆಯಾದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಇತಿಹಾಸ ಸೃಷ್ಟಿಸಿದ್ದು, ಯಶ್‌ ನಟನೆಯ ಈ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ರೂ.185 ಕೋಟಿಗೂ ಅಧಿಕ ಕಲೆಕ್ಷನ್‌ ದಾಖಲಿಸಿದೆ.
ಕನ್ನಡ ಚಿತ್ರರಂಗವಲ್ಲದೇ ಇಡೀ ವಿಶ್ವಾದ್ಯಂತ ಕ್ರೇಜ್ ಹುಟ್ಟಿಸಿದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾವು 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು.
ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಬರೆದಿದೆ.
ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಈ ಸಿನಿಮಾಕ್ಕೆ ವಿದೇಶಿ ಪ್ರೇಕ್ಷಕರಿಂದ ಕೂಡ ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಹಾಲಿವುಡ್ ಶೈಲಿಯ ಮೇಕಿಂಗ್ ಹೊಂದಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೊದಲ ದಿನದ, ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಅನ್ನೋದು ಅಭಿಮಾನಿಗಳು ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಕೂತೂಹಲ ಕೆರಳಿಸಿದೆ.
ಸಿನಿಮಾ‌ ಪಂಡಿತರ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಿನಿಮಾ ತನ್ನ ಹಿಂದಿನ ಕೆಜಿಎಫ್ ಕಲೆಕ್ಷನ್‌ ಬ್ರೇಕ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ. ಮೊದಲ ಕೆಜಿಎಫ್ ಸಿನಿಮಾ ಬಿಡುಗಡೆ ಆದಾಗ ವಿಶ್ವಾದ್ಯಂತ 100 ಕೋಟಿ ಕಲೆಕ್ಷನ್‌ ಮಾಡಿತ್ತು. ಆದರೆ, ಕೆಜಿಎಫ್ ಚಾಪ್ಟರ್ 2 ಈ ದಾಖಲೆಯನ್ನು ತಾನೇ ಮುರಿದು ವಿಶ್ವಾದ್ಯಂತ ಬರೋಬ್ಬರಿ ರೂ.185 ಕೋಟಿ ಕಲೆಕ್ಷನ್‌ ಮಾಡುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ ಎಂಬುದು ಸಿನಿಮಾ ಪಂಡಿತರು ಹೇಳುವ ಮಾತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!