September 10, 2026
Thursday, September 10, 2026
spot_img

ಚೆಪಾಕ್‌ನಲ್ಲೇ ‘ವಿಸಿಲ್ ಪೋಡು’ಸೆಲೆಬ್ರೇಷನ್ ಮಾಡಿದ ಕ್ಯಾಪ್ಟನ್: ಸಿಎಸ್‌ಕೆ ಕನಸಿಗೆ SRH ಕೊಳ್ಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್‌ಗೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ.

ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಕೌಟ್ ಕನಸು ಬಹುತೇಕ ಅಂತ್ಯಗೊಂಡಿದೆ. ತವರಿನ ಅಭಿಮಾನಿಗಳ ಎದುರೇ ಸಿಎಸ್‌ಕೆ ಮತ್ತೊಮ್ಮೆ ನಿರಾಸೆ ಅನುಭವಿಸಿತು.

ಇಶಾನ್ ಕಿಶನ್ ಮಿಂಚಿನ ಆಟ

181 ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್‌ಗೆ ಆರಂಭದಲ್ಲಿ ಒತ್ತಡ ಎದುರಾದರೂ, ಇಶಾನ್ ಕಿಶನ್ ಜವಾಬ್ದಾರಿಯುತ ಆಟವಾಡಿದರು. 47 ಎಸೆತಗಳಲ್ಲಿ 70 ರನ್ ಸಿಡಿಸಿದ ಅವರು, ಹೆನ್ರಿಚ್ ಕ್ಲಾಸೆನ್ ಜೊತೆ ಸೇರಿ ಮೂರನೇ ವಿಕೆಟ್‌ಗೆ ಅಮೂಲ್ಯ 75 ರನ್‌ಗಳ ಜೊತೆಯಾಟ ಕಟ್ಟಿದರು. ಈ ಜೊತೆಯಾಟವೇ ಪಂದ್ಯವನ್ನು ಎಸ್‌ಆರ್‌ಎಚ್ ಕಡೆ ತಳ್ಳಿತು.

‘ವಿಸಿಲ್ ಪೋಡು’ ಸ್ಟೈಲ್‌ನಲ್ಲಿ ಸಂಭ್ರಮ

ಗೆಲುವಿನ ಬಳಿಕ ಇಶಾನ್ ಕಿಶನ್ ಮಾಡಿದ ಸಂಭ್ರಮ ಇದೀಗ ವೈರಲ್ ಆಗಿದೆ. ಸಿಎಸ್‌ಕೆ ತಂಡದ ಪ್ರಸಿದ್ಧ ಘೋಷವಾಕ್ಯ ‘ವಿಸಿಲ್ ಪೋಡು’ ಶೈಲಿಯನ್ನೇ ಅನುಕರಿಸಿ, ಚೆಪಾಕ್ ಅಭಿಮಾನಿಗಳ ಎದುರೇ ಸೀಟಿ ಊದುವಂತೆ ಸನ್ನೆ ಮಾಡಿದರು. ಬಳಿಕ ಮನೆಗೆ ಹೋಗುವ ಸೂಚನೆ ನೀಡಿದ ರೀತಿಯ ಸಂಭ್ರಮ ಅಭಿಮಾನಿಗಳ ಗಮನ ಸೆಳೆಯಿತು.

ಪ್ಲೇಆಫ್ ಚಿತ್ರಣ ಸ್ಪಷ್ಟ

ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್ 16 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಈಗಾಗಲೇ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಕೂಡ ಮುಂದಿನ ಹಂತ ತಲುಪಿವೆ. ಇನ್ನೊಂದೆಡೆ 13 ಪಂದ್ಯಗಳಿಂದ ಕೇವಲ 12 ಅಂಕ ಗಳಿಸಿರುವ ಸಿಎಸ್‌ಕೆ ಟೂರ್ನಿಯಿಂದ ಹೊರಬೀಳುವ ಅಂಚಿಗೆ ತಲುಪಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !