Monday, August 8, 2022

Latest Posts

ಮನೆ ಕೆಲಸದವಳಿಂದಲೇ ಖ್ಯಾತ ವೈದ್ಯರ ಮನೆಯಲ್ಲಿ ನಗ-ನಾಣ್ಯ ಕಳವು

ದಿಗಂತ ವರದಿ ಮಂಡ್ಯ :

ಮನೆ ಕೆಲಸದವಳಿಂದಲೇ ಖ್ಯಾತ ವೈದ್ಯರ ಮನೆಯಲ್ಲಿ ಲಕ್ಷಾಂತರ ರೂ. ವೌಲ್ಯದ ನಗ-ನಾಣ್ಯ ಕಳವಾಗಿರುವ ಘಟನೆ ತಡವಾಗಿ ವರದಿಯಾಗಿದೆ.
ಇಲ್ಲಿನ ನೆಹರುನಗರದ ಖ್ಯಾತ ವೈದ್ಯ ಡಾ. ಬಿ.ಕೆ. ಸುರೇಶ್ ಅವರ ಮನೆಯಲ್ಲಿಯೇ 270 ಗ್ರಾಂಘಿ. ಚಿನ್ನಾಭರಣ ಹಾಗೂ 2 ಲಕ್ಷ ರೂ. ನಗದ ಹಣವನ್ನು ಮನೆಯ ಕೆಲಸ ಮಾಡುತ್ತಿದ್ದ ಮಹಿಳೆಯೇ ಕಳ್ಳತನ ಮಾಡಿದ್ದುಘಿ, ಆದರೂ ಅನುಮಾನ ಬಾರದಂತೆ ಕೆಲಸ ಮಾಡುತ್ತಿದ್ದಳೆನ್ನಲಾಗಿದೆ.
ನಗರದ ಹಾಲಹಳ್ಳಿ ಬಡಾವಣೆಯ ವರಲಕ್ಷ್ಮಿ ಎಂಬಾಕೆಯೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಮಹಿಳೆಯಾಗಿದ್ದುಘಿ, ಈಕೆ ಕಳೆದ ಡಿ. 19ರಂದು ವೈದ್ಯರ ನಿವಾಸದಲ್ಲಿ ಕಳ್ಳತನ ಮಾಡಿದ್ದಳೆಂದು ಹೇಳಲಾಗಿದೆ. ಆದರೆ ವೈದ್ಯರು ತಡವಾಗಿ ನೋಡಿಕೊಂಡ ಕಾರಣ ಕಳೆದ ೆ. 9ರಂದು ಕಳ್ಳತನವಾಗಿರುವ ಬಗ್ಗೆ ಪೂರ್ವ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ೆ. 10ರಂದು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ತಿಳಿದುಬಂತು. ಆರೋಪಿಯನ್ನು ಬಂಧಿಸಿದ ಪೊಲೀಸರು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss