September 16, 2026
Wednesday, September 16, 2026
spot_img

ಸಿಹಿ ತಿಂಡಿ ತೆಗೆದುಕೊಂಡ ಬಾಲಕನನ್ನು ಬಿಸಿ ತಂದೂರಿ ರೋಟಿ ಪಾತ್ರೆಗೆ ಹಾಕಿದ ಅಡುಗೆ ಭಟ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆ ಮನೆಯಲ್ಲಿ ರಸಗುಲ್ಲಾ ತೆಗೆದುಕೊಂಡ ಬಾಲಕನನ್ನು ಅಡುಗೆ ಭಟ್ಟನೊಬ್ಬ ತಂದೂರಿ ರೋಟಿ ಮಾಡುವ ಬಿಸಿ ಪಾತ್ರೆಗೆ ಎಸೆದು ಪರಾರಿಯಾಗಿದ್ದಾನೆ.

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿದೆ.

ತನ್ನದೇ ಸಂಬಂಧಿಕರ ಮದುವೆಗೆ ಬಂದಿದ್ದ 11 ವರ್ಷದ ಬಾಲಕ ಚಮನ್ ಒಂದೇ ಒಂದು ರಸಗುಲ್ಲ ಎತ್ತಿಕೊಂಡ ಕಾರಣ ಅಡುಗೆಯವರು ಬಿಸಿಯ ಪಾತ್ರೆಗೆ ಎಸೆದಿದ್ದಾರೆ. ತಕ್ಷಣವೇ ಉಳಿದ ಸಿಬ್ಬಂದಿ ಓಡಿಬಂದು ಬಾಲಕನನ್ನು ಹೊರಕ್ಕೆ ತೆಗೆದು ಅಯೋಧ್ಯಾ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ.‌

ಮನ್ ಬುಧವಾರ ತನ್ನ ಅಜ್ಜಿಯೊಂದಿಗೆ ಸಂಬಂಧಿಕರ ಮನೆಗೆ ಮದುವೆಗೆಂದು ಹೋಗಿದ್ದನು. ಈ ಸಂದರ್ಭದಲ್ಲಿ ಆತ ಆಹಾರ ತಯಾರಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಇರಿಸಲಾಗಿದ್ದ ರಸಗುಲ್ಲಾಗಳನ್ನು ತೆಗೆದು ತಿನ್ನಲು ಪ್ರಾರಂಭಿಸಿದ್ದಾನೆ. ಮಗು ಪದೇ ಪದೇ ರಸಗುಲ್ಲಾಗಳನ್ನು ಸೇವಿಸಿದಾಗ ಸ್ಥಳದಲ್ಲಿದ್ದ ಅಡುಗೆಯಾವನು ಸಿಟ್ಟುಗೊಂಡು ಮಗುವಿಗೆ ಬೆದರಿಸಿದ್ದಾನೆ. ಈ ವೇಳೆ ಮಗು ತಂದೂರಿ ಬಟ್ಟಿಗೆ ಬಿದ್ದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !