ರಸ್ತೆ ಬದಿ ಕಸ ಎಸೆದ ವ್ಯಕ್ತಿಯಿಂದಲೇ ಕಸ ಎತ್ತಿಸಿದ ಪಾಲಿಕೆ ಸಿಬ್ಬಂದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆ ಬದಿಗಳಲ್ಲಿ ಕಸ ಎಸೆಯಬೇಡಿ ಎಂದು ಎಷ್ಟೇ ಹೇಳಿದರೂ ಬದಿಗಳಲ್ಲಿ ಕಸದ ರಾಶಿ ಕಾಣುವುದು ತಪ್ಪಿಲ್ಲ. ರಸ್ತೆ ಬದಿಗಳಲ್ಲಿ ಕಸ ಹಾಕುವವರಿಗೆ ಹುಬ್ಬಳ್ಳಿಯಲ್ಲಿ ಪಾಲಿಕೆ ಸಿಬ್ಬಂದಿ ಚುರುಕು ಮುಟ್ಟಿಸಿದ್ದಾರೆ.

ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಪಾನ್‌ಶಾಪ್‌ನವರು ರಸ್ತೆ ಬದಿ ಕಸ ಚೆಲ್ಲಿದ್ದರು. ಇದನ್ನು ಅರಿತ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪಾನ್‌ಶಾಪ್ ಮಾಲೀಕರಿಂದಲೇ ಕಸ ಎತ್ತಿಸಿ ರಸ್ತೆ ಬದಿ ಶುಚಿಗೊಳಿಸಿದ್ದಾರೆ. ಮತ್ತೆ ಕಸ ಎಸೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಮರ್ಪಕ ಹಾಗೂ ವೈಜ್ಞಾನಿಕ ಕಸ ವಿಲೇವಾರಿ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನ ರಸ್ತಯಲ್ಲಿ ಕಸ ಎಸೆಯುವುದು ಕಡಿಮೆಯಾಗಿಲ್ಲ. ಜನರ ತಪ್ಪಿನಿಂದ ಜನರ ಸ್ವಾಸ್ಥ್ಯವೇ ಹಾಳಾಗುವುದು ಎನ್ನುವ ಸರಳ ವಿಷಯ ಅರಿತರೆ ಇಂಥ ತಪ್ಪುಗಳು ಆಗೋದಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!