ಆರು ತಿಂಗಳ ಬಳಿಕ ಶ್ರೀ ಮಹಾವಿಷ್ಣುವಿನ ದರ್ಶನ, ಬದರಿನಾಥನ ದೇಗುಲ ಪುನರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಾರ್‌ಧಾಮ್‌ಗಳಲ್ಲಿ ಒಂದಾದ ಬದರಿನಾಥ ದೇವಾಲಯದ ಬಾಗಿಲು ಇಂದು ಓಪನ್‌ ಆಗಿದೆ. ಸಾವಿರಾರು ಜನ ಭಕ್ತರ ಸಮೂಹದಲ್ಲಿ ವೇದ, ಮಂತ್ರ ಪಠಣಗಳೊಂದಿಗೆ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ಆರು ತಿಂಗಳಿಂದ ಬಂದ್‌ ಆಗಿದ್ದ ದೇವಾಲಯ ಹೂವು, ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಪೊಲೀಸ್‌ ಅಧಿಕಾರಿಗಳ ಬಿಗಿ ಭದ್ರತೆಯಲ್ಲಿ ಇಂದು ದೇವಾಲಯದ ಬಾಗಿಲು ತೆರೆಯಲಾಯಿತು.

ಅಲಕನಂದಾ ನದಿಯ ದಡದಲ್ಲಿ ಚಮೋಲಿ ಜಿಲ್ಲೆಯ ಗರ್ವಾಲ್ ಬೆಟ್ಟಗಳ ನಡುವೆ ನೆಲೆಗೊಂಡಿರುವ ಬದರಿನಾಥ ದೇವಾಲಯವು ಶ್ರೀ ಮಹಾ ವಿಷ್ಣುವಿಗೆ ಸಮರ್ಪಿತವಾಗಿದೆ. ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥಗಳನ್ನು ಒಳಗೊಂಡಿರುವ ‘ಚಾರ್ ಧಾಮ್’ ಎಂದು ಕರೆಯಲ್ಪಡುವ ನಾಲ್ಕು ಪುರಾತನ ಯಾತ್ರಾ ಸ್ಥಳಗಳಲ್ಲಿ ಈ ದೇವಾಲಯವು ಒಂದಾಗಿದೆ.

ಈಗಾಗಲೇ ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥ ದೇವಾಲಯದ ಬಾಗಿಲುಗಳು ತೆರೆದಿದ್ದು, ದೇವರ ದರ್ಶನಕ್ಕಾಗಿ ತಂಡೋಪತಂಡವಾಗಿ ಭಕ್ತರು ಆಗಮಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಚಾರ್ ಧಾಮ್‌ಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿದೆ. ಪ್ರತಿದಿನ ಒಟ್ಟು 15,000 ಯಾತ್ರಾರ್ಥಿಗಳಿಗೆ ಬದರಿನಾಥ, 12,000 ಕೇದಾರನಾಥ, 7,000 ಗಂಗೋತ್ರಿ ಮತ್ತು 4,000 ಯಮುನೋತ್ರಿಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!