June 27, 2026
Saturday, June 27, 2026
spot_img

ಗಡ್ಡ, ಮೀಸೆಯ ಹಿಂದೆ ಸಚಿವನ ಕನಸು: ಬಿ.ನಾಗೇಂದ್ರ ಅಭಿಮಾನಿಯ ಅಪರೂಪದ ಹರಕೆ

ಹೊಸದಿಗಂತ ವರದಿ ಬಳ್ಳಾರಿ:

ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಗಡ್ಡ, ಮೀಸೆ, ಕೂದಲು ತೆಗೆಯೋಲ್ಲ ಎಂದು ಬಳ್ಳಾರಿಯ ಎಂ.ಜಿ.ಕನಕ ಎನ್ನುವ ಅಭಿಮಾನಿಯೊಬ್ಬರು ಸಂಕಲ್ಪ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನಾಯಕ ಬಿ.ನಾಗೇಂದ್ರ ಅವರ ಅಭಿಮಾನಿ, ನಾನಾ ಕಾರಣಗಳಿಂದ ಅವರ ಸಚಿವ ಸ್ಥಾನವನ್ನು ಕಸಿದುಕೊಳ್ಳಲಾಯಿತು. ಇದು ಅತ್ಯಂತ ಬೇಸರವನ್ನುಂಟು ಮಾಡಿದೆ. ನಾಗೇಂದ್ರ ಅವರು ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಗಡ್ಡ, ಮೀಸೆ, ಕೂದಲು ತೆಗೆಯೋಲ್ಲ ಎಂದು ಅಂದೇ ನಿರ್ಧರಿಸಿದ್ದೆ, ಸಚಿವರಾಗವರೆಗೂ ನಾನು ಕಾಯುವೆ, ನಂತರ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಗೆ ತೆರಳಿ ಮುಡಿ ಕೊಟ್ಟು ಬರುವೆ ಎಂದರು.

ಇದನ್ನೂ ಓದಿ:

ಹರಕೆ ಎಲ್ಲರೂ ಈಡೇರಿಸ್ತಾರೆ, ನನ್ನದು ವಿಭಿನ್ನ ಹರಕೆ, ಅಣ್ಣ ಸಚಿವರಾಗುವವರೆಗೂ ಒಂದು ಕೂದಲು ತೆಗೆಯೋಲ್ಲ. ಈಗಾಗಲೇ ಒಂದೂವರೆ ವರ್ಷ ಆಯ್ತು, ಇನ್ನೂ ಕಾಯುವೆ. ಸಿ.ಎಂ.ಡಿಕೆ ಶಿವಕುಮಾರ್ ಅವರ ನೂತನ ಸಂಪುಟದಲ್ಲಿ ನಾಗೇಂದ್ರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅಂದುಕೊಂಡಿದ್ದೆ. ಆದರೆ, ಅದು ನಾನಾ ಕಾರಣಗಳಿಂದ ಕೈತಪ್ಪಿತು. ಎರಡನೇ ಪಟ್ಟಿಯಲ್ಲಿ ಆದರೂ ನಾಗೇಂದ್ರ ಅವರಿಗೆ ಪಕ್ಷದ ವರಿಷ್ಠರು, ಸಿ.ಎಂ., ಡಿಸಿಎಂ ಎಲ್ಲರೂ ಸೇರಿ ಅವಕಾಶ ಕಲ್ಪಿಸಬೇಕು, ನಿರ್ಲಕ್ಷ್ಯ ವಹಿಸಿದರೆ ನಮ್ಮ ಹೋರಾಟ ವಿಭಿನ್ನವಾಗಿರಲಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !