ಪ್ರಪಂಚದ ಅತ್ಯಂತ ದುಬಾರಿ ತಲೆದಿಂಬು, ವಜ್ರ ವೈಢೂರ್ಯಗಳಿಂದ ತಯಾರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರಾಮ ಮತ್ತು ಶಾಂತಿಯುತವಾಗಿ ಮಲಗಲು ಬಳಸುವ ದಿಂಬು ಅಬ್ಬಬ್ಬಾ ಅಂದ್ರೆ ಸಾವಿರದಲ್ಲಿ ಇರಬಹುದು. ಆದರೆ ಈ ದಿಂಬಿನ ಬೆಲೆ ಲಕ್ಷಗಳಲ್ಲಿದೆ. ನೆದರ್ಲಾಂಡ್ ತಜ್ಞರು ವಿಶ್ವದ ಅತ್ಯಂತ ದುಬಾರಿ ದಿಂಬನ್ನು ತಯಾರಿಸಿದ್ದು, ಬೆಲೆ ಗೊತ್ತಾದ್ರೆ ನೀವು ಶಾಕ್‌ ಆಗೋದು ಗ್ಯಾರೆಂಟಿ.

ಈ ದಿಂಬನ್ನು ನೀಲಮಣಿ, ವಜ್ರ, ಚಿನ್ನ, ಮಲ್ಬೆರಿ ರೇಷ್ಮೆ ಮತ್ತು ಇತರ ಹಲವು ಬೆಲೆಬಾಳುವ ವಸ್ತುಗಳಿಂದ ಮಾಡಲಾಗಿದೆ ಎಂದು ಡಿಸೈನರ್ ಟಿಜ್ ವ್ಯಾನ್ ಡೆರ್ ಹಿಲ್ಟ್ಸ್ ಹೇಳಿದ್ದಾರೆ. ಈ ವಿಶಿಷ್ಟ ದಿಂಬನ್ನು ತಯಾರಿಸಲು 15 ವರ್ಷಗಳ ಕಾಲ ಒಟ್ಟಾಗಿ ಶ್ರಮಿಸಿದ್ದೇವೆ ಎಂದಿದ್ದಾರೆ.  ದಿಂಬಿನ ಆರಂಭಿಕ ಬೆಲೆ $ 57,000, ಅಂದರೆ ಸುಮಾರು 45 ಲಕ್ಷ ರೂ. ಈ ದಿಂಬಿನ ಕುರಿತು ವಿವರಗಳನ್ನು tailormadepillow.com ನಲ್ಲಿ ನೀಡಲಾಗಿದೆ.

ಈ ಲಿಂಕ್‌ನಲ್ಲಿ ದಿಂಬು ತಯಾರಿಸುವ ಪ್ರಕ್ರಿಯೆಯನ್ನು ವೀಡಿಯೊ ರೂಪದಲ್ಲಿ ಹಂಚಿಕೊಳ್ಳಲಾಗಿದೆ. ಈ ಅತ್ಯಾಧುನಿಕ ದಿಂಬನ್ನು ಈಜಿಪ್ಟಿನ ಹತ್ತಿ ಮತ್ತು ಮಲ್ಬೆರಿ ರೇಷ್ಮೆಯಿಂದ ತಯಾರಿಸಲಾಗಿದೆ. ಇದು ವಿಷಕಾರಿಯಲ್ಲದ ಫೋಮ್ನಿಂದ ತುಂಬಿದೆ. ದಿಂಬಿನ ಮೇಲ್ಭಾಗವು 22.5 ಕ್ಯಾರೆಟ್ ನೀಲಮಣಿ ಮತ್ತು ನಾಲ್ಕು ವಜ್ರಗಳಿಂದ ಕೂಡಿದೆ. ಸುರಕ್ಷಿತ ಮತ್ತು ಆರೋಗ್ಯಕರ ನಿದ್ರೆಗಾಗಿ, ವಿದ್ಯುತ್ಕಾಂತೀಯ ವಿಕಿರಣವನ್ನು ತಡೆಗಟ್ಟಲು 24 ಕ್ಯಾರೆಟ್ ಚಿನ್ನದಿಂದ ಮುಚ್ಚಲ್ಪಟ್ಟಿದೆ.

ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಶಾಂತಿಯುತವಾಗಿ ಮಲಗಲು ಈ ದಿಂಬು ಸಹಾಯ ಮಾಡುತ್ತದೆ ಎಂದು ಡಿಸೈನರ್ ಹೇಳುತ್ತಾರೆ. ಹೈಟೆಕ್ ಪರಿಹಾರಗಳು ಮತ್ತು ವಿಂಟೇಜ್ ಕರಕುಶಲ ವಸ್ತುಗಳನ್ನು ಸಂಯೋಜಿಸುವ ಮೂಲಕ ಟೈಲರ್ ಮೇಡ್ ಪಿಲ್ಲೊ ಅತ್ಯಂತ ನವೀನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!