ಮನೆಯಲ್ಲಿ ಒಪ್ಪಲಿಲ್ಲವೆಂದು ಗೆಳತಿಯೊಂದಿಗಿರಲು ಲಿಂಗ ಬದಲಾಯಿಸಿಕೊಂಡ ಮಹಿಳೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಹಿಳೆಯೊಬ್ಬರು ತಮ್ಮ ಸಂಬಂಧವನ್ನು ಕುಟುಂಬಗಳು ವಿರೋಧಿಸಿದ ನಂತರ ತನ್ನ ಗೆಳತಿಯೊಂದಿಗೆ ಇರಲು ತನ್ನ ಲಿಂಗವನ್ನು ಬದಲಾಯಿಸಿಕೊಂಡಿದ್ದಾಳೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಸಲಿಂಗಿಗಳಾಗಿದ್ದ(ಲೆಸ್ಬಿಯನ್)‌ ಇಬ್ಬರು ಗೆಳತಿಯರು ಜೀವನದ ಕೊನೆಯವರೆಗೂ ಜೊತೆಯಾಗಿರಲು ಪ್ರತಿಜ್ಞೆ ಮಾಡಿದ್ದರು. ಆದರೆ ಅವರ ಕುಟುಂಬದವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮಹಿಳೆಯು ಕುಟುಂಬಗಳನ್ನು ಮನವೊಲಿಸಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಪ್ರಯತ್ನಿಸಿದಳು ಆದರೆ ವ್ಯರ್ಥವಾಯಿತು. ತನ್ನ ಸಂಗಾತಿಯನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದ ಆಕೆ ಕುಟುಂಬದವರ ಹಸ್ತಕ್ಷೇಪ ಹಾಗೂ ಅಡಚನಣೆಯನ್ನು ತಪ್ಪಿಸಲು ಕೊನೆಗೆ ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾಳೆ.

ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ವೈದ್ಯರು ಆಕೆಯ ಲಿಂಗ ಬದಲಾವಣೆ ಶಸ್ತ್ರಕ್ರಿಯೆ ನಡೆಸಿದ್ದಾರೆ. ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿಯನ್ನು ಆಕೆಗೆ ನೀಡಲಾಗುತ್ತಿದ್ದು ಇದು ಪೂರ್ತಿಯಾಗಲು ಸುಮಾರು 1.5 ವರ್ಷಬೇಕಾಗುತ್ತದೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!