September 13, 2026
Sunday, September 13, 2026
spot_img

ಈ ಮನೆ ಕಟ್ಟಿದ ಇಂಜಿನಿಯರ್‌ನ್ನು ಮೆಚ್ಚಲೇಬೇಕು! ಎಷ್ಟು ಜೋರಾಗಿ ನೀರು ಬಂದರೂ ಗಟ್ಟಿಯಾಗಿ ನಿಂತ ಕಟ್ಟಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೇಪಾಳ ಮತ್ತು ಟಿಬೆಟ್‌ ಗಡಿ ಭಾಗದ ಹಿಮಾಲಯ ಪ್ರದೇಶದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಎಷ್ಟು ಜೋರಾಗಿ ನೀರು ಬಂದರೂ ಗಟ್ಟಿಯಾಗಿ ನಿಂತ ಕಟ್ಟಡದ ವಿಡಿಯೋವೊಂದು ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಜನರು ಈ ಕಟ್ಟಡದ ವಿಡಿಯೋವನ್ನು ಶೇರ್‌ ಮಾಡಿಕೊಂಡು, ಇಷ್ಟು ನೀರು ಬಂದರೂ ಅಲುಗಾಡದ ಕಟ್ಟಡ ನಿರ್ಮಿಸಿರುವ ಇಂಜಿನಿಯರ್‌ ಹಾಗೂ ಮೇಸ್ತ್ರಿಯ ಕಾರ್ಯವನ್ನು ಮೆಚ್ಚಲೇಬೇಕು ಎಂದಿದ್ದಾರೆ. ಇತರರು ಈಗೇನೋ ಗಟ್ಟಿ ನಿಂತಿರುವಂತೆ ಕಾಣಿಸುತ್ತಿದೆ ಆದರೆ ಪ್ರಕೃತಿಯ ಮುಂದೆ ಮನುಷ್ಯ ಶೂನ್ಯ. ಕೆಲವೇ ಸಮಯದಲ್ಲಿ ಆ ಮನೆಯೂ ಬಿದ್ದು ಹೋಗುತ್ತದೆ ಎಂದಿದ್ದಾರೆ.

ವಿಡಿಯೋದಲ್ಲೇನಿದೆ?

ಟ್ವಿಟರ್‌ನಲ್ಲಿ ರಿಶಿ ಬಗ್ರೀ ಎನ್ನುವವರು ಈ ವಿಡಿಯೋ ಶೇರ್‌ ಮಾಡಿದ್ದು, ಈ ಮನೆಯ ಪಿಲ್ಲರ್‌ ವರ್ಕ್‌ ಹಾಗೂ ಕಾಲಮ್‌ ಸ್ಟ್ರಕ್ಚರ್‌ ಮಾಡಿರುವ ವ್ಯಕ್ತಿಗೆ ಗೋಲ್ಡ್‌ ಮೆಡಲ್‌ ನೀಡಬೇಕು ಎಂದು ಕ್ಯಾಪ್ಷನ್‌ ನೀಡಿದ್ದಾರೆ.
ಈ ವಿಡಿಯೋದಲ್ಲಿ ನದಿಯ ನೀರು ಭೋರ್ಗರೆಯುವ ದೃಶ್ಯ ಕಾಣಿಸುತ್ತದೆ. ಇಡೀ ಪ್ರದೇಶವೇ ನದಿಯಂತೆ ಕಾಣಿಸುತ್ತಿದ್ದು, ಒಂದು ಮನೆ ಮಾತ್ರ ತನಗೇನೂ ಆಗಿಲ್ಲ ಎನ್ನುವಂತೆ ನಿಂತಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಕುಟುಂಬದ ಸದಸ್ಯರು ಕೂಡ ನಿಂತಿದ್ದು, ಯಾರ ಮುಖದಲ್ಲಿಯೂ ಸಣ್ಣ ಗಾಬರಿ ಕಾಣಿಸುತ್ತಿಲ್ಲ. ಮಹಡಿಯಿಂದ ಕೆಳಕ್ಕೆ ಇಳಿಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾಲ್ಕೂ ದಿಕ್ಕಿನಿಂದ ನೀರು ದಿಗ್ಭಂಧನ ಹಾಕಿದಂತಿದೆ. ಜನರು ಮಹಡಿಯ ಬಾಲ್ಕನಿ ಬಳಿ ನಿಂತು ಪ್ರವಾಹವನ್ನು ವೀಕ್ಷಿಸುತ್ತಿದ್ದಾರೆ. ಮಕ್ಕಳು ಹಾಗೂ ಹಿರಿಯರು ಇಲ್ಲಿರುವುದು ಕಾಣಿಸುತ್ತಿದೆ. ಮನೆಯ ಸುತ್ತಮುತ್ತ ನೀರಿನಲ್ಲಿ ವಾಹನಗಳು ತೇಲುತ್ತಿರುವುದು, ಇತರ ಮನೆಯ ಅವಶೇಷಗಳು, ತಗಡುಗಳು ಹೊರಕ್ಕೆ ಬರುತ್ತಿರುವುದು ಕಾಣಿಸುತ್ತಿದೆ. ಈ ಮನೆಯ ಹಿಂಬದಿ ಮಾತ್ರ ಡ್ಯಾಮೇಜ್‌ ಆಗಿರುವುದು ಕಾಣಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !