ಸ್ನೇಹ ಸೊಸೈಟಿಯಿಂದ ಮನೀಷಾ ಚವ್ಹಾಣಗೆ ಉಚ್ಚಾಟನೆ

ಹೊಸದಿಗಂತ ವರದಿ,ಕಲಬುರಗಿ:

ಸ್ನೇಹ ಸೊಸೈಟಿ ಹೆಸರಿಗೆ ಕಳಂಕ ತಂದಿರುವ ಮಂಗಳಮುಖಿ ಮನೀಷಾ ಚವ್ಹಾಣ ಅವರನ್ನು ಸ್ನೇಹ ಸೊಸೈಟಿಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷೆ ಯಶ್ವಂತ ಮುಸ್ಕಾನ್ ಹಾಗೂ ಕಾರ್ಯದರ್ಶಿ ಅಂಬಿಕಾ ಮಂಗಳಮುಖಿ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು ೨೩೦೦ಕ್ಕಿಂತಲೂ ಹೆಚ್ಚು ಮಂಗಳಮುಖಿಯರು ಇದ್ದು, ಅವರನ್ನು ಸಂಘಟಿಸಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 2011ರಲ್ಲಿ ಸ್ನೇಹ ಸೊಸೈಟಿ ರಚಿಸಲಾಯಿತು ಎಂದರು.ಈ ಸೊಸೈಟಿ ಜವಾಬ್ದಾರಿಯನ್ನು ಮನೀಷಾ ಚವ್ಹಾಣ ಅವರಿಗೆ ವಹಿಸಿ ಕೊಡಲಾಗಿತ್ತು. ಮೊದಲಿಗೆ ಚೆನ್ನಾಗಿ ಸೊಸೈಟಿಯನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದರು.ಆದರೆ, ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ ಸೊಸೈಟಿ ವಿರುದ್ಧ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರು. ಸಮುದಾಯದ ಹೆಸರಿನಿಂದ ಹೆದರಿಸುತ್ತಿರುವುದನ್ನು ನಮ್ಮ ಗಮನಕ್ಕೆ ಬಂದಿರುವುದರಿಂದ ಅವರು ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದರು.ಸುಮಾರು ರೂ. 28ಲಕ್ಷ ಲೆಕ್ಕಪತ್ರ ಇಲ್ಲಿವರೆಗೂ ನೀಡಿಲ್ಲ. ಮಂಗಳಮುಖಿಯರ ಹೆಸರಿನಲ್ಲಿಅನ್ಯ ಚಟುವಟಿಕೆಯಲ್ಲಿ ತೊಡಗಿ, ಅವರ ಈ ಚಟುವಟಿಕೆಗಳಿಂದ ಬೇಸತ್ತು 2000ಕ್ಕೂ ಹೆಚ್ಚು ಮಂಗಳಮುಖಿಯರು ಮನೀಷಾರ ವಿರುದ್ಧ ಹೋರಾಟ ಮಾಡಿದ್ದಾರೆ. ಆದ್ರೂ ಲೆಕ್ಕಪತ್ರ ನೀಡಿಲ್ಲ. ವಿನಾಕಾರಣ ಸೊಸೈಟಿ ಮತ್ತು ಮಂಗಳಮುಖಿಯರು ವಿರುದ್ಧ ಪತ್ರಿಕೆಯ ಹೇಳಿಕೆ ನೀಡಿತ್ತಿದ್ದಾರೆ. ಎದುರಿಗೆ ಬಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.ತನಗೆ ಆಶ್ರಯ ನೀಡಿದ ಸ್ನೇಹ ವಿರುದ್ಧ ಚಟುವಟಿಕೆ ನಡೆಸಿದ್ದರಿಂದ ಅವರನ್ನು ಉಚ್ಚಾಟಿಸಲಾಗಿದ್ದು, ಸ್ನೇಹ ಸೊಸೈಟಿಗೂ ಹಾಗೂ ಮನೀಷಾಗೂ ಯಾವುದೇ ಸಂಬಂಧವಿಲ್ಲ ಎಂದು ಎಂದರು.ಸಂತೋಷಿ ಎಂ.ಮಂಜುನಾಥ ಭಂಡಾರಿ ಹಾಗೂ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!