Saturday, February 24, 2024

ಸಿನಿಮಾ ಫ್ಲಾಪ್ ಆಗಿದ್ದಕ್ಕೆ ಸಂಭಾವನೆ ಹಿಂದಿರುಗಿಸಿದ ಫೇಮಸ್ ಹೀರೊ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಜೆಟ್ ಸಿನಿಮಾಗಳಿಗೆ ಹೀರೋಗಳು ಪೆರಯುವ ಸಂಭಾವನೆ ಅಷ್ಟಿಷ್ಟಲ್ಲ. ಕೆಲಸ ಮಾಡಿದ್ದಕ್ಕೆ ಸಂಬಳ ಪಡೆಯುವುದು ಮಾಮೂಲು. ಆದರೆ ಇಲ್ಲೊಬ್ಬ ಹೀರೋ ನಾನು ಪಡೆದ ಸಂಭಾವನೆಗೆ ತಕ್ಕಂತೆ ಸಿನಿಮಾ ಓಡಿಲ್ಲ, ನನಗೆ ದುಡ್ಡು ಬೇಡ ಅಂತಿದ್ದಾರೆ.

ಹೌದು, ಇವರು ಬೇರಾರೂ ಅಲ್ಲ, ಫೇಮಸ್ ನಟ ವಿಜಯ ದೇವರಕೊಂಡ. ಲೈಗರ್ ಸಿನಿಮಾಕ್ಕಾಗಿ ತಂಡ ಹೆಚ್ಚು ಹಣ ಖರ್ಚು ಮಾಡಿದೆ.
Liger fame Vijay Deverakonda will return 6 crore to producers for the film failureಅಷ್ಟೇ ಅಲ್ಲದೇ ಎಲ್ಲೆಡೆ ಪ್ರಚಾರ ಕೂಡ ಮಾಡಿದ್ದಾರೆ. ಇಷ್ಟಾಗಿಯೂ ಸಿನಿಮಾ ಅಂದುಕೊಂಡಷ್ಟು ಓಡಲಿಲ್ಲ. ಹಿಂದಿಯಲ್ಲಿ ಸಿನಿಮಾ ಕಲೆಹಾಕಿದ್ದು ಕೇವಲ 18 ಕೋಟಿ ರೂ. ಮಾತ್ರ. ಇದರಿಂದಾಗಿ ದೇವರಕೊಂಡ ಬೇಸರದಲ್ಲಿದ್ದು, ಸಂಭಾವನೆಯನ್ನು ನಿರ್ಮಾಪಕರಿಗೆ ವಾಪಾಸ್ ಮಾಡಲು ನಿರ್ಧರಿಸಿದ್ದಾರಂತೆ.
ಪುರಿ ಜಗನ್ನಾತ್, ಕರಣ್ ಜೋಹರ್, ಚಾರ್ಮಿ ಕೌರ್ ಹಾಗೂ ಅಪೂರ್ವ ಮೆಹ್ತಾ ಈ ಸಿನಿಮಾಕ್ಕೆ ಹೂಡಿಕೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!