ಮಗಳು ಬದುಕಿದ್ದಂತೆಯೇ ಶ್ರದ್ಧಾಂಜಲಿ ಫೋಟೊ ಹಾಕಿಸಿದ ತಂದೆ! ಅಂಥದ್ದೇನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೆಲಂಗಾಣದ ಸಿರ್ಸಿಲ್ಲಾ ಪಟ್ಟಣದಲ್ಲಿ ಹೆತ್ತ ತಂದೆಯೊಬ್ಬರು ಬದುಕಿರುವ ತಮ್ಮ ಮಗಳ ಫೋಟೊಗೆ ಹಾರ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಮಗಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾದ ಕಾರಣ ತಂದೆ ಚಿಲುವೆರಿ ಮುರುಳಿ ಮಗಳು ಸತ್ತಿದ್ದಾಳೆ ಎಂದು ಹೇಳಿ ಬ್ಯಾನರ್‌ ಮಾಡಿಸಿ ಹಾಕಿದ್ದಾರೆ.

ಮಗಳು ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಹುಡುಗನನ್ನು ಪ್ರೀತಿಸಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯುವಕನೊಂದಿಗೆ ಆಕೆ ಮನೆ ಬಿಟ್ಟು ಹೋಗಿದ್ದಾಳೆ.

ಓಡಿ ಹೋಗಿ ಇಬ್ಬರೂ ಮದುವೆಯಾಗಿದ್ದಾರೆ. ಊರಿನಲ್ಲಿ ಮರ್ತಾದಿ ಹೋಗಿದೆ ಎಂದು ಮುರುಳಿ ಮಗಳು ಸತ್ತು ಹೋಗಿದ್ದಾಳೆ ಎಂದು ಬ್ಯಾನರ್‌ ಮಾಡಿಸಿ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!