Saturday, December 2, 2023

Latest Posts

ಮಗುವಿನೊಂದಿಗೆ ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ತಂದೆ!

ಹೊಸ ದಿಗಂತ ವರದಿ, ಮೈಸೂರು:

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಗಂಡು ಮಗುವಿನೊಂದಿಗೆ ಓವರ್‌ಹೆಡ್ ವಾಟರ್ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಸುವಿನಹಳ್ಳಿಯಲ್ಲಿ ನಡೆದಿದೆ.

ಪತ್ನಿ ಜೊತೆಗಿನ ಜಗಳದಿಂದ ಬೇಸತ್ತು ಕೃಷ್ಣಮೂರ್ತಿ (40) ತನ್ನ ಎರಡು ವರ್ಷದ ಮಗುವನ್ನು ಎತ್ತಿಕೊಂಡು ಓವರ್ ಹೆಡ್ ನೀರಿನ ಟ್ಯಾಂಕ್‌ನ್ನು ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ನಡೆಸಿದ್ದಾನೆ. ಸ್ಥಳೀಯ ಮುಖಂಡರು ಆತನ ಮನವೊಲೈಸಲು ಪ್ರಯತ್ನಿಸಿದರು.

ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ 112 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ನಿನ್ನ ಸಮಸ್ಯೆಯನ್ನು ಬಗೆಹರಿಸಿಕೊಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಕೃಷ್ಣಮೂರ್ತಿ ತನ್ನ ಮಗುವಿನೊಂದಿಗೆ ಟ್ಯಾಂಕ್ ಮೇಲಿಂದ ಕೆಳಗಿಳಿದು ಬಂದ. ಬಳಿಕ ಪೊಲೀಸರು ಆತನ ಸಮಸ್ಯೆಯನ್ನು, ದೂರುಗಳನ್ನು ಆಲಿಸಿ, ಸಮಾಧಾನಪಡಿಸಿದರು. ಈ ಹೈಡ್ರಾಮಾದಿಂದ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕವುಂಟಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!