April 16, 2026
Thursday, April 16, 2026
spot_img

ಸುಳ್ಯದಲ್ಲಿ ದಿಢೀರ್ ಸುರಿದ ವರ್ಷದ ಮೊದಲ ಮಳೆ: ರೈತರು ಕಂಗಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: :

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಗ್ರಾಮವಾದ ಸಂಪಾಜೆ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ೨೦೨೬ರ ಮೊದಲ ಮಳೆ ಸಿಂಚನವಾಯಿತು.

ಸುಳ್ಯ ತಾಲೂಕಿನ ಸಂಪಾಜೆ ಕಲ್ಲುಗುಂಡಿ ವ್ಯಾಪ್ತಿಯಲ್ಲಿ ಅಕಾಲಿಕವಾಗಿ ಮೊದಲ ಮಳೆಯಾಗಿದ್ದು, ಅಂಗಳಗಳಲ್ಲಿ ಒಣಗಲು ಹಾಕಲಾಗಿದ್ದ ಅಡಿಕೆ ಹಾಗೂ ಇತರೆ ಕೃಷ್ಯುತ್ಪನ್ನಗಳು ಮಳೆಗೆ ಒದ್ದೆಯಾಗಿ ನಷ್ಟ ಸಂಭವಿಸಿತು. ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿನ ವಾತಾವರಣವಿದ್ದು, ಇಂದು ಸಂಜೆ ಸುಮಾರು ೪.೩೦ರಿಂದ ೫ ಗಂಟೆಯ ವೇಳೆಗೆ ಧಾರಾಕಾರವಾಗಿ ಮಳೆ ಸುರಿಯಿತು. ಮಳೆ ನೀರು ರಸ್ತೆಯಲ್ಲಿ ಧಾರಾಕಾರವಾಗಿ ಹರಿದು ಹೋಗಿದೆ. ಸುಮಾರು ೧೦ ನಿಮಿಷಗಳಿಗೂ ಹೆಚ್ಚಿನ ಕಾಲ ಮಳೆ ಸುರಿದು ಭೂಮಿಯನ್ನು ತಂಪಾಗಿಸಿತು.

ಪುತ್ತೂರು ತಾಲೂಕಿನ ಸುಳ್ಯಪದವಿನಲ್ಲೂ ಮಧ್ಯಾಹ್ನದ ವೇಳೆ ಉತ್ತಮ ಮಳೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !