ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಟಿಕಲ್ 370 ರದ್ದು ಗೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದ ಚಿತ್ರಣ ಬಡಲಾಗುತ್ತಿದ್ದು, ಇದೀಗ ಎಲ್ಲೆಡೆ ತಿರಂಗ ಹಾರಾಡುತ್ತಿದೆ.
ಕಲ್ಲು ತೂರಾಟ, ಬಾಂಬ್ ಸದ್ದು ಕೇಳಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಶಾಂತಿ ನೆಲೆಸುತ್ತಿದೆ.
ಇದೀಗಜಮ್ಮು ಮತ್ತು ಕಾಶ್ಮೀರದ ಮೊತ್ತ ಮೊದಲ ಅತೀ ದೊಡ್ಡ ಶಾಪಿಂಗ್ ಮಾಲ್ ಆರಂಭಗೊಳ್ಳುತ್ತಿದೆ. ದುಬೈ ಮೂಲದ ಎಮಾರ್ ಗ್ರೂಪ್ ಬರೋಬ್ಬರಿ 5,000 ಚದರ ಅಡಿಯ ಶಾಪಿಂಗ್ ಮಾಲ್ ತೆರೆಯುತ್ತಿದೆ. ಇದು ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದ ಮೊದಲ ಫಾರಿನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್(FDI).
ಇಂದು(ಮಾ.19) ದುಬೈ ಮೂಲದ EMAAR ಗ್ರೂಪ್ ಶ್ರೀನಗರದಲ್ಲಿ ಅತೀ ದೊಡ್ಡ ಶಾಪಿಂಗ್ ಮಾಲ್ ಆರಂಭಿಸಲು ಅಡಿಗಲ್ಲು ಹಾಕಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗರ್ವನರ್ ಮನೋಜ್ ಕೆ ಸಿನ್ಹ ಶಿಲನ್ಯಾಸ ನೇರವೇರಿಸಿದ್ದಾರೆ. ಎಮಾರ್ ಮಾಲ್‌ನಲ್ಲಿ ಲೂಲು ಹೈಪರ್ ಮಾರ್ಕೆಟ್ ಕೂಡ ಇರಲಿದೆ. ಎಮಾರ್ ಗ್ರೂಪ್ ಜಮ್ಮು ಮತ್ತು ಕಾಶ್ಮೀರದಲ್ಲಿ ಬರೋಬ್ಬರಿ 19,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಮೊದಲ ಹಂತದಲ್ಲಿ ಲೂಲೂ ಹೈಪರ್ ಮಾಲ್ ಆರಂಭಗೊಳ್ಳುತ್ತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಲೂಲೂ ಗ್ರೂಪ್ ಈಗಾಗಲೇ ಹಣ್ಣುಗಳ ರಫ್ತು ವ್ಯವಾಹರ ನಡೆಸುತ್ತಿದೆ. ಇದೀಗ ಲೂಲೂ ಮಾಲ್ ಮೂಲಕ ವ್ಯವವಾಹರವನ್ನು ಮತ್ತಷ್ಟು ವಿಸ್ತರಿಸುತ್ತಿದ್ದೇವೆ ಎಂದರು. ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯವಾಹಿನಿಗೆ ತರಲು ಹಲವು ಪ್ರಯತ್ನಗಳನ್ನು ನಡೆಸುತ್ತಿದೆ.ಹೀಗಾಗಿ ಈ ರಾಜ್ಯದಲ್ಲಿ ಅಭೂತಪೂರ್ವ ಬದಲಾವಣೆ ಕಾಣುತ್ತಿದ್ದೇವೆ ಎಂದು ಯೂಸೂಫ್ ಆಲಿ ಹೇಳಿದ್ದಾರೆ.
ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಖಾಸಗಿ ಕಂಪನಿಗಳು ಹೂಡಿಕೆ ಮಾಡುತ್ತಿದೆ. ಕಳೆದ ತಿಂಗಳು JSW ಸ್ಟೀಲ್ ಕಂಪನಿ 12,000 ಮೆಟ್ರಿಕ್ ಟನ್ ಕಲರ್ ಕೋಟೆಡ್ ಸ್ಟೀಲ್ ಉತ್ಪಾದನಾ ಘಟಕ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ. ಒಂದೆಡೆ ಪ್ರವಾಸೋದ್ಯಮ ತ್ವರಿತಗತಿಯಲ್ಲಿ ಅಭಿವೃದ್ದಿ ಕಾಣುತ್ತಿದೆ. ಭಯೋತ್ಪಾದನೆ ಹತ್ತಿಕ್ಕಿದ ಕಾರಣ ಇದೀಗ ಹಲವರು ಕಾಶ್ಮೀರ ಪ್ರವಾಸ ಕೈಗೊಳ್ಳುತ್ತಿದ್ದಾರೆ.
Sharing my speech at the laying of foundation stone of Mall of Srinagar by Emaar.https://t.co/QrhFHB7B0h pic.twitter.com/Sl8YrdIsdk
— Office of LG J&K (@OfficeOfLGJandK) March 19, 2023