ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವೆಲ್ಲಿಂಗ್ಟನ್ನಲ್ಲಿ ನಡೆಯಬೇಕಾಗಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ರದ್ದಾಗಿದೆ. ಭಾರೀ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದು, ಟಾಸ್ ಕೂಡ ನಡೆದಿರಲಿಲ್ಲ. ಸುದೀರ್ಘ ಕಾಯುವಿಕೆ ನಂತರ ಅಂಪೈರ್ಗಳು ಪಂದ್ಯ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಟಾಸ್ ನಡೆಯುವ ವೇಳೆ ಮಳೆ ಆರಂಭವಾಗಿದೆ. ಜೋರು ಮಳೆ ಸುರಿಯುತ್ತಿದ್ದು, ನಿಲ್ಲುವ ಮುನ್ಸೂಚನೆ ಕಾಣಲಿಲ್ಲ. ಹೀಗಾಗಿ ಪಂದ್ಯ ರದ್ದುಗೊಳಿಸಲಾಗಿದೆ.