TRENDING | ವರ್ಷಾಂತ್ಯಕ್ಕೆ ಅಥಿಯಾ ಶೆಟ್ಟಿ- ಕೆ ಎಲ್ ರಾಹುಲ್ ವಿವಾಹ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ತಂಡದ ಉಪನಾಯಕ ಕೆ ಎಲ್ ರಾಹುಲ್ ಶೀಘ್ರದಲ್ಲೇ ಅಭಿಮಾನಿಗಳಿಗೆ ಶುಭಸುದ್ದಿ ನೀಡಲಿದ್ದಾರೆ.
ಕೆ ಎಲ್ ರಾಹುಲ್ ಅವರೊಂದಿಗೆ ಮೂರು ವರ್ಷಗಳಿಂದ ಡೇಟಿಂಗ್​ನಲ್ಲಿರುವ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಇನ್ನೇನು ಮೂರು ತಿಂಗಳಲ್ಲಿ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ.
ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಮತ್ತು ರಾಹುಲ್ ಅವರ ಪೋಷಕರು ಇತ್ತೀಚೆಗೆ ಅಥಿಯಾ ಅವರ ಕುಟುಂಬವನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಮದುವೆಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಅಥಿಯಾ ಶೆಟ್ಟಿಯವರೇ ಮುಂದೆ ನಿಂತು ನೋಡಿಕೊಳ್ಳುತ್ತಿದ್ದಾರೆ. ವಿವಾಹ ಕಾರ್ಯ ಮುಂಬೈನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಅಥಿಯಾ ಇತ್ತೀಚೆಗಷ್ಟೇ ಕೆ.ಎಲ್. ರಾಹುಲ್ ಅವರ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು.
ಇವರಿಬ್ಬರು ಸುಮಾರು ಮೂರು ವರ್ಷಗಳಿಂದ ಡೇಟಿಂಗ್​ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅದಾಗ್ಯೂ ಮದುವೆ ಬಗ್ಗೆ ಈ ಜೋಡಿಯಿಂದ ಅಥವಾ ಅವರ ಕುಟುಂಬದಿಂದ ಇನ್ನೂ ಯಾವುದೇ ಅಧೀಕೃತ ಮಾಹಿತಿ ಹೊರ ಬಿದ್ದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!