ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ನೂತನ ಕ್ರಮಕ್ಕೆ ಮುಂದಾಗಿದೆ.
ಎಐ ತಂತ್ರಜ್ಞಾನ ಹೊಂದಿರುವ ವಿನೂತನ ಕ್ಯಾಮೆರಾ ಅಳವಡಿಸಿದ್ದು, ಇದರಿಂದಾಗಿ ಓವರ್ ಸ್ಪೀಡಿಂಗ್ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ. ವೆಹಿಕಲ್ ಸ್ಪೀಡ್ ಡಿಟೆಕ್ಟರ್ ಕ್ಯಾಮೆರಾವನ್ನು ಅಳವಡಿಸಿರುವ ಕಾರಣ ಮಿತಿ ಮೀರಿ ಸ್ಪೀಡಿಂಗ್ ಮಾಡಿದರೆ ವಾಹನ ಸವಾರರಿಗೆ ದಂಡ ಬೀಳುತ್ತದೆ. ಎಡಬದಿಯ ಟ್ರ್ಯಾಕ್‌ಗೆ 60 ಕಿ.ಮೀ., ಮಧ್ಯದ ಟ್ರ್ಯಾಕ್‌ಗೆ 80 ಕಿ.ಮೀ ಹಾಗೂ ಬಲ ಬದಿ ಟ್ರ್ಯಾಕ್‌ಗೆ 100 ಕಿ.ಮೀ ವೇಗದ ಮಿತಿ ಹಾಕಲಾಗಿದೆ. ವಾಹನ ಸವಾರರ ಮನೆ ಬಾಗಿಲಿಗೆ ದಂಡ ಬೀಳಲಿದೆ.