ಅಗತ್ಯವಲ್ಲದ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸಲು ಚಿಂತಿಸುತ್ತಿದೆ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಗತ್ಯವಲ್ಲದ ವಸ್ತುಗಳ ಮೇಲಿನ ಆಂದು ಸುಂಕವನ್ನು ಹೆಚ್ಚಿಸಿ ಅವುಗಳ ಆಮದನ್ನು ನಿಯಂತ್ರಿಸಲು ಸರ್ಕಾರ ಚಿಂತಿಸುತ್ತಿದೆ. ರಫ್ತುಗಳಲ್ಲಿನ ನಿಧಾನಗತಿ ಮತ್ತು ವ್ಯಾಪಾರ ಕೊರತೆಯು ಹೆಚ್ಚುತ್ತಿರುವುದರಿಂದ ಸರ್ಕಾರ ಈ ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ ಪ್ರೆಸ್‌ ವರದಿ ಮಾಡಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆಮದುಸುಂಕ ಹೆಚ್ಚಿಸಲು ಅಗತ್ಯವಿರುವ ಅಗತ್ಯವಲ್ಲದ ವಸ್ತುಗಳ ಪಟ್ಟಿಯನ್ನು ಸಿದ್ಧ ಪಡಿಸುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. “ದೇಶೀಯವಾಗಿ ಸಾಕಷ್ಟು ಉತ್ಪಾದನಾ ಸಾಮರ್ಥ್ಯವಿರುವ, ಅನಿವಾರ್ಯವಲ್ಲದ ವಸ್ತುಗಳ ಆಮದನ್ನು ನಾವು ನೋಡುತ್ತಿದ್ದೇವೆ. ಹೀಗಾಗಿ ಅಂತಹ ವಸ್ತುಗಳನ್ನು ಗುರುತಿಸಿ ಅವುಗಳ ಮೇಲೆ ಆಮದು ಸುಂಕ ಹೆಚ್ಚಿಸಲು ಚಿಂತಿಸಲಾಗುತ್ತಿದೆ. ಇದು ಪರ್ಯಾಯ ಆಮದಿಗೆ ಅವಕಾಶ ನೀಡುತ್ತದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದರ ಏರಿಕೆಯನ್ನು ಕಾಣುವ ಸರಕುಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ದೇಶದಲ್ಲಿ “ಸಾಕಷ್ಟು ಉತ್ಪಾದನಾ ಸಾಮರ್ಥ್ಯ” ಹೊಂದಿರುವ ಸರಕುಗಳಿಗೆ ಮಾತ್ರ ಈ ಹೆಚ್ಚಳ ಸೀಮಿತವಾಗಿರುತ್ತದೆ ಎಂದು ವರದಿಯಾಗಿದೆ.

ಗುರುವಾರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ವ್ಯಾಪಾರ ಕೊರತೆಯು ತಿಂಗಳ ಅವಧಿಯಲ್ಲಿ 23.89 ಶತಕೋಟಿ ಡಾಲರ್‌ ಗೆ ಏರಿಕೆಯಾಗಿದೆ. ಆದರೂ ಭಾರತದ ರಫ್ತುಗಳು ನವೆಂಬರ್‌ನಲ್ಲಿ 0.59 ಶೇಕಡಾದಿಂದ 31.99 ಶತಕೋಟಿಡಾಲರ್ ಬೆಳವಣಿಗೆ ದಾಖಲಿಸಿವೆ. ಸುಮಾರು ಎರಡು ವರ್ಷಗಳ ಅಂತರದ ನಂತರ ಭಾರತದ ರಫ್ತುಗಳು ಋಣಾತ್ಮಕ ಪ್ರದೇಶವನ್ನು ಪ್ರವೇಶಿಸಿದ್ದು ಜಾಗತಿಕ ಬೇಡಿಕೆಯ ಕುಸಿತದಿಂದಾಗಿ ಅಕ್ಟೋಬರ್‌ನಲ್ಲಿ 16.65 ಶೇಕಡಾದಿಂದ 29.78 ಶತಕೋಟಿ ಡಾಲರ್‌ಗಳಿಗೆ ತೀವ್ರವಾಗಿ ಕುಸಿದಿದೆ.

ಈ ಹಿನ್ನೆಲೆಯಲ್ಲಿ ಸಾಕಷ್ಟು ಉತ್ಪಾದನಾ ಸಾಮರ್ಥ್ಯವಿರುವ ಅಗತ್ಯವಲ್ಲದ ವಸ್ತುಗಳನ್ನು ಗುರುತಿಸಿ ಅವುಗಳ ಮೇಲೆ ಆಮದು ಸುಂಕ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!