July 18, 2026
Saturday, July 18, 2026
spot_img

ಖಜಾನೆಗೆ ಕಷ್ಟವಾದರೂ ಜನರಿಗೆ ಬೆನ್ನೆಲುಬಾಗಿ ನಿಂತ ಸರ್ಕಾರ: ಗ್ಯಾರಂಟಿ ಗುಟ್ಟು ಬಿಚ್ಚಿಟ್ಟ ಡಿಸಿಎಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದರೂ, ಜನರ ನೆರವಿಗೆ ನಿಲ್ಲುವುದು ನಮ್ಮ ಮೊದಲ ಆದ್ಯತೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಆಂಬುಲೆನ್ಸ್ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಹಿಂದಿರುವ ಸರ್ಕಾರದ ಸಂಕಲ್ಪವನ್ನು ಹಂಚಿಕೊಂಡರು.

ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿಯಂತಹ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದು ನಿಜ. ಆದರೆ ಈ ಹೊರೆಯನ್ನೇ ಲೆಕ್ಕಿಸದೆ ಜನರಿಗೆ ಮಾನಸಿಕ ಹಾಗೂ ಆರ್ಥಿಕ ಭದ್ರತೆ ನೀಡಲು ಸರ್ಕಾರ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಸಮರ್ಥಿಸಿಕೊಂಡರು.

“ಜೇಬಿನಲ್ಲಿ ಕೇವಲ 10 ರೂಪಾಯಿ ಇರುವ ವ್ಯಕ್ತಿಗೆ ನೂರು ರೂಪಾಯಿ ಕೊಡುವ ದಾನಿ ಸಿಕ್ಕರೆ ಅವನಲ್ಲಿ ಎಂತಹ ಆತ್ಮವಿಶ್ವಾಸ ಮೂಡುತ್ತದೆಯೋ, ಅಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಸಾಮಾನ್ಯ ಜನರಲ್ಲಿ ಬದುಕಿನ ಭರವಸೆ ತುಂಬಲು ನಾವು ಬದ್ಧರಾಗಿದ್ದೇವೆ,” ಎಂದು ಡಿ.ಕೆ. ಶಿವಕುಮಾರ್ ಈ ಸಂದರ್ಭದಲ್ಲಿ ಮಾರ್ಮಿಕವಾಗಿ ನುಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !