‘ದಿ ಕೇರಳ ಸ್ಟೋರಿ’ ಬಿಡುಗಡೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲವ್ ಜಿಹಾದ್ ಮತ್ತಿತರ ವಿಚಾರಗಳಿಗಾಗಿ ವ್ಯಾಪಕ ವಿವಾದಕ್ಕೆ ಒಳಗಾಗಿರುವ ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ.

ಸಿನಿಮಾ ಹೇಗಿದೆ ಹಾಗೇ ಕೇರಳ ಜನತೆ ಒಪ್ಪುತ್ತಾರೆ. ಇದೇ ಇತಿಹಾಸ ಎಂದೇನೂ ಹೇಳದೇ ಇದೊಂದು ಕಥಾಹಂದರ ಎಂದು ಹೇಳಿಕೊಂಡುಬಂದಿರುವ ಸಿನಿಮಾದಿಂದ ಏನು ತೊಂದರೆ? ಸಮಾಜದಲ್ಲಿ ಮತೀಯತೆ ಹಾಗೂ ಸಂಘರ್ಷವನ್ನು ಇದು ಹೇಗೆ ಸೃಷ್ಟಿಸುತ್ತದೆ? ಎಂದು ಅರ್ಜಿದಾರರನ್ನು ಕೋರ್ಟ್ ಪ್ರಶ್ನಿಸಿದೆ.

ಒಂದು ಸಿನಿಮಾ ಬಂದ ತಕ್ಷಣ ಏನೋ ಆಗಿಬಿಡುತ್ತದೆ ಎಂದು ಹೇಗೆ ಅಂದುಕೊಳ್ಳೋಕೆ ಸಾಧ್ಯ? ನವೆಂಬರ್‌ನಲ್ಲಿ ಸಿನಿಮಾ ಟೀಸರ್ ರಿಲೀಸ್ ಆಗಿದೆ, ಇದರಲ್ಲಿ ಭಾವನೆಗೆ ಧಕ್ಕೆ ಆಗುವಂಥದ್ದು ಏನಿದೆ? ಅಲ್ಲಾ ಒಬ್ಬನೇ ದೇವರು ಎಂದು ಹೇಳಿರುವುದನ್ನು ತೋರಿಸಿದ್ದರಲ್ಲಿ ತಪ್ಪಿಲ್ಲ. ಅವರವರ ದೇವರನ್ನು ನಂಬುವುದು ಅದರ ಬಗ್ಗೆ ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!