ಹೆಗಲ ಮೇಲೆ ಪತ್ನಿಯನ್ನು ಹೊತ್ತು 70 ಮೆಟ್ಟಿಲು ಹತ್ತಿದ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾಗಳಲ್ಲಿ ಈ ಸೀನ್ ನೋಡಿರುತ್ತೀರ, ತನ್ನ ಪ್ರೀತಿಯನ್ನು ಸಾಬೀತು ಮಾಡೋದಕ್ಕೆ ಗಂಡ ಹೆಂತಿಯನ್ನು ಹೊತ್ತು ಸಾಕಷ್ಟು ಮೆಟ್ಟಿಲುಗಳನ್ನು ಹತ್ತುತ್ತಾನೆ.
ಇದೇ ರೀತಿ ನಿಜಜೀವನದಲ್ಲೂ ತನ್ನ ಪತ್ನಿಯನ್ನು ಹೊತ್ತುಕೊಂಡು 70 ಮೆಟ್ಟಿಲನ್ನು ಪತಿ ಏರಿದ್ದಾನೆ. ತಿರುಪತಿಯಲ್ಲಿ ವರದಾ ವೀರವೆಂಕಟ ಸತ್ಯನಾರಾಯಣ ಎಂಬುವವರು ತಮ್ಮ ಪತ್ನಿ ಲಾವಣ್ಯಾರನ್ನು ಹೊತ್ತುಕೊಂಡು ಮೆಟ್ಟಿಲು ಏರಿದ್ದಾರೆ.

ತಿರುಪತಿ ಮೆಟ್ಟಿಲುಗಳನ್ನು ಏರುವ ವೇಳೆ, ತಮಾಷೆಯಾದ ಮಾತುಕತೆ ಆರಂಭವಾಗಿದ್ದು, ಹೆಂಡತಿ ಹೊತ್ತುಕೊಂಡು ಎಷ್ಟು ಮೆಟ್ಟಿಲು ಹತ್ತಬಹುದು ಎನ್ನುವ ವಿಷಯಕ್ಕೆ ಬೆಟ್ ಕಟ್ಟಿದ್ದಾರೆ. ಬೆಟ್ಟ ಹತ್ತುವ ಉಳಿದವರಿಗೆ ಇದು ಮೋಜು ಎನಿಸಿದ್ದು, ವಿಡಿಯೋ ವೈರಲ್ ಆಗಿದೆ. ಗಂಡ ಹೆಂಡತಿ ಮಧ್ಯೆ ಅದೆಂಥಾ ಪ್ರೀತಿ ಎಂದು ಜನ ಖುಷಿ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!