ಹೆಂಡತಿಯನ್ನು ಕೊಂದು ವರ್ಷಗಟ್ಟಲೆ ಡ್ರಮ್‌ನಲ್ಲಿ ಶವ ಬಚ್ಚಿಟ್ಟ ಗಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೀಗ ಹಾಕಿದ್ದ ಬಾಡಿಗೆ ಮನೆಯೊಳಗೆ ಇದ್ದ ಡ್ರಂನಲ್ಲಿ ಮಹಿಳೆಯ ಶವದ ಭಾಗಗಳು ಪತ್ತೆಯಾಗಿವೆ.

ಮೃತದೇಗಹ ಒಂದು ವರ್ಷದಿಂದ ಡ್ರಂನಲ್ಲಿಯೇ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಿಂದ ತಾಳಲಾರದಷ್ಟು ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದವರು ದೂರಿದ್ದಾರೆ. ಬಾಡಿಗೆದಾರರು ಕೆಲ ತಿಂಗಳಿಂದ ಬಾಡಿಗೆ ನೀಡದಕ್ಕೆ ಅನುಮಾನ ಬಂದು ಮನೆಯ ಮಾಲೀಕರು ಬಾಗಿಲು ಒಡೆದಿದ್ದು, ಡ್ರಮ್ ಒಳಗೆ ಮೃತದೇಹದ ಭಾಗಗಳು ಕಾಣಿಸಿವೆ.

ಮಧುರವಾಡದಲ್ಲಿ ಇರುವ ಮನೆಯಲ್ಲಿ ಘಟನೆ ನಡೆದಿದ್ದು, ಬಾಡಿಗೆದಾರ ಬಾಡಿಗೆ ಕೊಡದೇ ತಿಂಗಳುಗಳೇ ಕಳೆದಿತ್ತು. ಮನೆಯ ಸಾಮಾನುಗಳನ್ನು ಎತ್ತಿ ಎಸೆಯಲು ಬಲವಂತವಾಗಿ ಮನೆಯೊಳಗೆ ನುಗ್ಗಿದಾಗ ಶವ ಬಚ್ಚಿಟ್ಟಿರುವುದು ಗೊತ್ತಾಗಿದೆ.

ಪತ್ನಿ ಗರ್ಭಿಣಿ ಆಕೆ ತವರು ಮನೆಗೆ ಹೋಗಿದ್ದಾಳೆ ಎಂದು ಬಾಡಿಗೆದಾರ ಹೇಳಿದ್ದ. ತನ್ನ ವಸ್ತುಗಳನ್ನು ತೆಗೆದುಕೊಂಡು ಮನೆಗೆ ಬೀಗ ಹಾಕಿ ಆತ ಊರು ಬಿಟ್ಟಿದ್ದಾರೆ. ಮನೆಯ ಡ್ರಮ್‌ನಲ್ಲಿ ಹೆಂಡತಿಯ ಶವ ಬಚ್ಚಿಟ್ಟು ಪರಾರಿಯಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!