ದಿಗಂತ ವರದಿ ಹುಬ್ಬಳ್ಳಿ:
ಸರ್ಕಾರ ಉರುಳಿಸಲು ಕಾಂಗ್ರೆಸ್ ಶಾಸಕರ ಖರೀದಿಸುವ ವಿಚಾರ ಶಾಸಕ ರವಿಕುಮಾರ ಗಾಣಿಗ ಅವರು ಪ್ರಸ್ತಾಪಿಸಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರದ್ಲಾಂಜೆ ಅವರ ಮೇಲೆ ಶಾಸಕ ರವಿಕುಮಾರ ಗಾಣಿಗ ಅವರು ಆರೋಪಿಸಿದ್ದಾರೆ ಎಂದರು.
ಕಾಂಗ್ರೆಸ್ ಈಗಾಗಲೇ ಒಡೆದ ಮನೆಯಾಗಿದೆ. ಅದನ್ನು ಮರೆಮಾಚುವ ನಿಟ್ಟಿನಲ್ಲಿ ಇನ್ನೊಂದು ಪಕ್ಷದ ಮೇಲೆ ಗೂಬೆ ಕುರಿಸುವ ಕೆಲಸ ಮಾಡಲಾಗುತ್ತಿದೆ.
ಶಾಸಕ ಗಾಣಿಗ ರವಿಕುಮಾರ ಹೇಳಿಕೆಗೆ ನಮ್ಮ ಪಕ್ಷದಿಂದ ಈಗಾಗಲೇ ಠಾಣೆಗಳಲ್ಲಿ ದೂರು ಕೂಡಾ ನೀಡಲಾಗಿದೆ ಎಂದು ತಿಳಿಸಿದರು.
ಸಿಎಂ ಅವರು ಮುಡಾ ಹಾಗೂ ವಾಲ್ಮೀಕಿ ಹಗರಣದಿಂದಾಗಿ ಬದಲಾಗುವುದು ಅವರಿಗೆ ನಿಶ್ಚಿತವಾಗಿದೆ. ತಮ್ಮ ಪಕ್ಷದ ಆಂತರಿಕ ದುರಾಡಳಿತ ಮರೆಮಾಚುವ ದೃಷ್ಠಿಯಿಂದ ಈ ರೀತಿ ಹೇಳಿಕೆಯ ಮೂಲಕ ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಕೈ ಪಕ್ಷದಲ್ಲಿ ಆಂತರಿಕ ವಿಚಾರಗಳು ಹೊರಗೆ ಬರುತ್ತಿದ್ದು, ಹೊಸ ನಾಟಕ ಆರಂಭಿಸುತ್ತಾರೆ ಎಂದು ಹೇಳಿದರು.
ಗಾಣಿಕ ರವಿಕುಮಾರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಪಕ್ಷದಿಂದ ಯಾವುದಾದರೂ ಆಫರ್ ಬಂದಿದ್ದರೆ ಅದನ್ನು ಅವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಬಹಿರಂಗ ಪಡಿಸದೇ ಇದ್ದಲ್ಲಿ ಮಾನ ನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡದ ಅವರು, ಸಿಎಂ ಬದಲಾವಣೆ ವಿಷಯ ದಟ್ಟವಾಗುತ್ತಿದಂತೆ ವಿಪಕ್ಷಗಳ ಮೇಲೆ ಈ ರೀತಿ ಹೇಳಿಕೆ ಸರಿಯಲ್ಪ. ಗಾಣಿಗ ರವಿಕುಮಾರ ಅವರು ಡಿಕೆಶಿ ಪರಾಮಾಪ್ತರು. ಸಿದ್ದರಾಮಯ್ಯ ಇಳಿಯುತ್ತಿದಂತೆ ಡಿಕೆಶಿ ಸಿಎಂ ಮಾಡಲು ಯತ್ನಿಸುತ್ತಿದ್ದಾರೆ. ಇನ್ನೊಂದು ಕಡೆ ಸತೀಶ ಜಾರಕಿಹೊಳ್ಳಿ ಬಣ ಕ್ರೀಯಾಶಿಲವಾಗಿದೆ. ಅವರ ಪಕ್ಷದ ಆಂತರಿಕ ವಿಷಯ ಮುಚ್ಚಿಕೊಳ್ಳಲು ಈ ರೀತಿ ಗಾಣಿಗ ರವಿಕುಮಾರ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದು ಅವರು ಹೇಳಿದರು.