ನೇತಾಜಿ ಪ್ರತಿಮೆ ರೂಪುಗೊಂಡ ಬಗೆ- ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ಚಿತ್ರಸಂಪುಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಲಾವಿದ ಮನಸು ಮಾಡಿದ್ರೆ ಕಲ್ಲು ಮೂರ್ತಿಯಾಗುವುದು ದೊಡ್ಡದೇನಲ್ಲ….ಇದಕ್ಕೆ ಅದೆಷ್ಟೋ ನಿದರ್ಶನಗಳಿವೆ. ಅದಕ್ಕೆ ಹೊಸದಾಗಿ ಇದೀಗ ಉದ್ಘಾಟನೆಗೊಂಡಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯೂ ಸಾಕ್ಷಿಯಾಗಿದೆ. ಬರೋಬ್ಬರಿ 280 ಮೆಟ್ರಿಕ್ ಟನ್ ಏಕಶಿಲಾ ಗ್ರಾನೈಟ್‌ ಅನ್ನು ಕೆತ್ತನೆ ಮಾಡಿ ಕಲಾವಿದರು ಇದಕ್ಕೆ ಮೂರ್ತಿಯ ರೂಪ ನೀಡಿದ್ದಾರೆ. ಮೂರ್ತಿ ಕೆತ್ತನೆಯ ಹಿರಿಮೆ ಮತ್ತೆ ಕರ್ನಾಟಕದ ಪಾಲಾಗಿರುವುದು ಮತ್ತೊಂದು ಸಂತಸದ ಸಂಗತಿ.

ಕೇದಾರನಾಥದಲ್ಲಿ ಅನಾವರಣಗೊಂಡ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿದ ಮೈಸೂರಿನ ಹೆಮ್ಮೆಯ ಕಲಾವಿದ ಅರುಣ್ ಯೋಗಿರಾಜ್ ಅವರೇ ಇದೀಗ ನೇತಾಜಿ ಅವರ ಪ್ರತಿಮೆಯನ್ನೂ ಕೆತ್ತಿದ್ದಾರೆ. ಇದಕ್ಕಾಗಿ ಅವರು ಸವೆಸಿದ ಸಮಯ ಸುಮಾರು 75 ದಿನಗಳು ಅಂದರೆ, 26 ಸಾವಿರ ಮಾನವ ಗಂಟೆಗಳನ್ನು ವ್ಯಯಿಸಿದ್ದಾರೆ.

ಇಂಡಿಯಾಗೇಟ್ ಬಳಿ ಅನಾವರಣಗೊಂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 280 ಟನ್ ಏಕಶಿಲೆಯ ಗ್ರಾನೈಟ್ ಪ್ರತಿಮೆ ಕೆತ್ತನೆಯ ಪ್ರಯಾಣವನ್ನು ಅರುಣ್‌ ಯೋಗಿರಾಜ್‌ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಜೊತೆಗೆ ಈ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!