ಫಿಲ್ಮ್​ಫೇರ್​’ ಪ್ರಶಸ್ತಿಗೆ ‘ದಿ ಕಾಶ್ಮೀರ್​ ಫೈಲ್ಸ್​’ ನಾಮಿನೇಟ್: ನಮಗೆ ಏನು ಬೇಡ ಎಂದು ತಿರಸ್ಕರಿಸಿದ ಅಗ್ನಿಹೋತ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಬಾಲಿವುಡ್ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಪ್ರತಿಷ್ಠಿತ ‘ಫಿಲ್ಮ್​ಫೇರ್​’ ಪ್ರಶಸ್ತಿ (Filmfare Awards) ವಿರುದ್ಧ ಅವರು ಗುಡುಗಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾ ಬರೋಬ್ಬರಿ 7 ವಿಭಾಗಗಳಲ್ಲಿ ನಾಮಿನೇಟ್​ ಆಗಿದೆ. ಹಾಗಿದ್ದರೂ ಕೂಡ ಈ ಪ್ರಶಸ್ತಿ ಪಡೆಯಬಾರದು ಎಂದು ವಿವೇಕ್​ ಅಗ್ನಿಹೋತ್ರಿ ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭಗಳ ಹಿಂದಿರುವ ರಾಜಕೀಯದ ಬಗ್ಗೆ ಈಗಾಗಲೇ ಅನೇಕ ನಟ-ನಟಿಯರು ಮಾತನಾಡಿದ್ದುಂಟು. ಇದೀಗ ವಿವೇಕ್​ ಅಗ್ನಿಹೋತ್ರಿ ಮಾತನಾಡಿದ್ದು, ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘68ನೇ ಫಿಲ್ಮ್​ಫೇರ್​ ಅವಾರ್ಡ್ಸ್​​ನಲ್ಲಿ ನನ್ನ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ 7 ವಿಭಾಗಗಳಲ್ಲಿ ನಾಮಿನೇಟ್​ ಆಗಿದೆ ಎಂಬುದು ಮಾಧ್ಯಮಗಳಿಂದ ತಿಳಿಯಿತು. ಆದರೆ ನೈತಿಕತೆ ಇಲ್ಲದ, ಸಿನಿಮಾ ವಿರೋಧಿಯಾದ ಈ ಪ್ರಶಸ್ತಿತನ್ನು ನಯವಾಗಿ ತಿರಸ್ಕರಿಸುತ್ತೇನೆ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಬರಹ ಆರಂಭಿಸಿದ್ದಾರೆ.

‘ಫಿಲ್ಮ್​ಫೇರ್​ ಆಯೋಜಕರ ಪ್ರಕಾರ ಸ್ಟಾರ್​ ಕಲಾವಿದರನ್ನು ಹೊರತುಪಡಿಸಿ ಇನ್ನುಳಿದವರ ಮುಖಕ್ಕೆ ಬೆಲೆ ಇಲ್ಲ. ಬೇರೆ ಯಾರೂ ಮುಖ್ಯರಲ್ಲ. ಫಿಲ್ಮ್​ಫೇರ್​ನಿಂದ ನಿರ್ದೇಶಕರಿಗೆ ಘನತೆ ಬರೋದಿಲ್ಲ. ಬದಲಿಗೆ, ಅವಮಾನಿಸುವ ಈ ವ್ಯವಸ್ಥೆ ಅಂತ್ಯವಾಗಬೇಕು. ಹಾಗಾಗಿ ನಾನು ಇದನ್ನು ವಿರೋಧಿಸುತ್ತಿದ್ದೇನೆ. ಬರಹಗಾರರು, ನಿರ್ದೇಶಕರು ಮತ್ತು ಇತರೆ ವಿಭಾಗಗಳ ಮುಖ್ಯಸ್ಥರನ್ನು ಕೀಳಾಗಿ ಕಾಣುವ ವ್ಯವಸ್ಥೆಯ ಭಾಗವಾಗಲು ನಾನು ನಿರಾಕರಿಸುತ್ತೇನೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

2022ರಲ್ಲಿ ತೆರೆಕಂಡ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!