ವಿಮಾನದಲ್ಲಿ ಪಾಕ್‌ ಯುವಕನ ಹುಚ್ಚಾಟ: ಕಿಟಕಿ ಗಾಜು ಒಡೆಯಲು ಯತ್ನಿಸಿರುವ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ವಿಮಾನದಲ್ಲಿ ಪಾಕಿಸ್ತಾನಿ ಪ್ರಯಾಣಿಕರೊಬ್ಬರು ಅವಾಂತರ ಸೃಷ್ಟಿಸಿದ್ದಾರೆ. ಸೀಟ್‌ಗಳನ್ನು ಕಾಲಿನಿಂದ ಒದ್ದಿ, ವಿಮಾನದ ಕಿಟಕಿ ಗಾಜುಗಳನ್ನು ಒಡೆಯಲು ಯತ್ನಿಸಿದ್ದಾನೆ. ವ್ಯಕ್ತಿಯ ಅನುಚಿತ ವರ್ತನೆಯಿಂದ ಪ್ರಯಾಣಿಕರು ಭಯಭೀತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೇ ತಿಂಗಳ 14ರಂದು ಪೇಶಾವರದಿಂದ ದುಬೈಗೆ ಹೊರಟಿದ್ದ ಪಿಕೆ-283 ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಟೇಕಾಫ್‌ ಆಗುತ್ತಲೇ ವಿಮಾನದ ಸಿಬ್ಬಂದಿ ಬಳಿ ತನ್ನನ್ನು ವಿಮಾನದಿಂದ ಕೆಳಗಿಳಿಸುವಂತೆ ಕಾಟ ಕೊಟ್ಟಿದ್ದಾನೆ. ಆಸನಗಳಿಗೆ ಒದ್ದು, ಸೀಟುಗಳ ಮಧ್ಯದಲ್ಲಿ ಮಲಗಿ ಅನುಚಿತವಾಗಿ ವರ್ತಿಸುತ್ತಿದ್ದ. ಜೊತೆಗೆ ತನ್ನ ಕಾಲುಗಳಿಂದ ವಿಮಾನದ ಕಿಟಕಿ ಗಾಜು ಒಡೆಯಲು ಪ್ರಯತ್ನಿಸಿದನು. ವಿಮಾನದ ಸಿಬ್ಬಂದಿ ವ್ಯಕ್ತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಮಾನದಲ್ಲಿ ಅವಾಂತ ಸೃಷ್ಟಿಸಿದ ಆತನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!