July 20, 2026
Monday, July 20, 2026
spot_img

ಈ ಹಳ್ಳಿಯ ಜನರಿಗೆ ಸಂಜೆ ಅನ್ನೋದೇ ಗೊತ್ತಿಲ್ಲ! ನಾಲ್ಕು ಗಂಟೆಗೆಲ್ಲಾ ಗಾಢ ಕತ್ತಲು, ನೀರವ ಮೌನ

ಜನರ ದಿನಚರಿಯ ಬೆಸ್ಟ್‌ ಪಾರ್ಟ್‌ ಅಂದ್ರೆ ಸಂಜೆ! ದಿನವಿಡೀ ಉರಿದ ಸೂರ್ಯ ನಮಗೆ ಪರ್ಫೆಕ್ಟ್‌ ಎನಿಸುವಷ್ಟು ಮಾತ್ರ ಬೆಳಕನ್ನು ನೀಡ್ತಾ ಇರತ್ತೆ. ಈ ಸಮಯದಲ್ಲಿ ಸುತ್ತಾಡ್ಬೇಕು, ಒಂದೊಳ್ಳೆ ಸ್ನಾಕ್ಸ್‌ ತಿನ್ನಬೇಕು, ನೆಚ್ಚಿನ ಪುಸ್ತಕ ಓದ್ಬೇಕು, ಮಕ್ಕಳನ್ನು ಪಾರ್ಕಿಗೆ ಕರ್ಕೊಂಡು ಹೋಗ್ಬೇಕು, ಸ್ನೇಹಿತರ ಜೊತೆ ಔಟಿಂಗ್‌ ಮಾಡ್ಬೇಕು, ಸಂಗಾತಿಯ ಜೊತೆ ಲಾಂಗ್‌ ಡ್ರೈವ್‌ ಹೋಗ್ಬೇಕು..

ಆದರೆ ಇಷ್ಟು ಅಂದದ ಸಂಜೆಯನ್ನೇ ಒಂದು ಹಳ್ಳಿಯ ಜನ ಮಿಸ್‌ ಮಾಡ್ಕೋತಿದ್ದಾರೆ. ಆದರೆ ಬೇಕಂತ ಅಲ್ಲ! ಇದು ಪ್ರಕೃತಿಯ ಆಟ. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್‌ ಮಂಡಲದಲ್ಲಿರುವ ಕೊಡುರುಪಾಕ ಎನ್ನುವ ಸುಂದರವಾದ ಹಳ್ಳಿಯಲ್ಲಿ ಸಂಜೆ ಅನ್ನೋ ಕಾನ್ಸೆಪ್ಟ್‌ ಇಲ್ಲ. ಬೆಳಗ್ಗೆ ಸೂರ್ಯ ಬಂದ ನಂತರ ತಮ್ಮೆಲ್ಲಾ ಕೆಲಸಗಳನ್ನು ಬೇಗ ಬೇಗ ಮಾಡಿ ಸಂಜೆ ನಾಲ್ಕು ಗಂಟೆಗೆಲ್ಲಾ ಜನ ಊಟ ಮುಗಿಸಿ ಮಲಗಿಬಿಡ್ತಾರೆ.

ನಮ್ಮಲ್ಲಿ ಕತ್ತಲಾಗೋಕೆ ಆರು ಗಂಟೆ ಆಗಬೇಕು. ಆದರೆ ಇಲ್ಲಿ ನಾಲ್ಕು ಗಂಟೆಗೆ ಸಂಪೂರ್ಣ ಕತ್ತಲು ಆವರಿಸಿಬಿಡುತ್ತದೆ. ಇದರಿಂದಾಗಿ ದಿನ ಮುಗಿದುಹೋಗುತ್ತದೆ. ಜನ ಸಂಜೆಯೇ ದೀಪ ಬೆಳಗಿಸಿ, ಊಟ ಮುಗಿಸಿ ನಿದ್ದೆಗೆ ಜಾರುತ್ತಾರೆ.

ಹೀಗ್ಯಾಕೆ?

ಈ ಗ್ರಾಮಕ್ಕೆ ಬೃಹತ್‌ ಗಾತ್ರದ ಬೆಟ್ಟಗಳ ದಿಗ್ಬಂಧನ ಇದೆ. ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ‘ರಂಗನಾಯಕುಲ ಗುಟ್ಟ’ ಮತ್ತು ‘ಗೋರ್ಲಾ ಗುಟ್ಟ’ ಎಂಬ ಬೃಹತ್ ಎತ್ತರದ ಬೆಟ್ಟಗಳಿವೆ. ಮಧ್ಯಾಹ್ನ 3.30 ರಿಂದ 4ರ ಅವಧಿಯಲ್ಲಿ ಸೂರ್ಯ ಪಶ್ಚಿಮಕ್ಕೆ ವಾಲುತ್ತಿದ್ದಂತೆ, ಈ ಎತ್ತರದ ಬೆಟ್ಟಗಳು ಗೋಡೆಯಂತೆ ನಿಂತು ಸೂರ್ಯನ ಬೆಳಕನ್ನು ತಡೆಯುತ್ತವೆ. ನಮ್ಮಲ್ಲಿ ದಿನಕ್ಕೆ 12 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಸಿಗುತ್ತದೆ. ಆದರೆ ಈ ಬೆಟ್ಟಗಳ ನೆರಳಿನಿಂದಾಗಿ ಕೊಡುರುಪಾಕ ಗ್ರಾಮಕ್ಕೆ ಕೇವಲ 9 ಗಂಟೆಗಳ ಕಾಲ ಮಾತ್ರ ಸೂರ್ಯನ ಬೆಳಕು ಲಭ್ಯವಾಗುತ್ತದೆ. ಇದಕ್ಕೆ ತಕ್ಕಂತೆ ಜನ ತಮ್ಮ ಜೀವನವನ್ನು ಹೆಣದುಕೊಂಡಿದ್ದಾರೆ.

ಬೆಳಗ್ಗೆಯೂ ನಿಧಾನ

ಇಡೀ ದೇಶದಲ್ಲಿ ಬೆಳಕಾದ ಅರ್ಧ ಗಂಟೆಯ ನಂತರ ಬೆಟ್ಟಗಳನ್ನು ಸೀಳಿಕೊಂಡು ಸೂರ್ಯನ ಬೆಳಕು ಈ ಊರಿಗೆ ಬೀಳುತ್ತದೆ. ಮಧ್ಯಾಹ್ನ ಮೂರುವರೆಗೆ ಸಂಜೆಯಂತಹ ಕತ್ತಲು ಆವರಿಸುವ ಕಾರಣ ಜನ ಬೆಳಗ್ಗೆ ಬೇಗ ಕೆಲಸ ಆರಂಭಿಸುತ್ತಾರೆ. ರೈತರು ಕಾರ್ಮಿಕರು ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಬೆಳಗ್ಗೆ ಬೇಗ ಎದ್ದು ಹೋಗಿ ಮಧ್ಯಾಹ್ನಕ್ಕೆಲ್ಲಾ ವಾಪಾಸಾಗಿಬಿಡುತ್ತಾರೆ. ನಾಲ್ಕು ಗಂಟೆಗೆ ಊಟ ಮುಗಿಸಿ ಮಲಗಿಬಿಡುತ್ತಾರೆ. ಈ ಭೌಗೋಳಿಕ ಬದಲಾವಣೆಯನ್ನು ಕಣ್ತುಂಬಿಕೊಳ್ಳಲು ಜನ ಈ ಹಳ್ಳಿಗೆ ಒಂದು ದಿನಕ್ಕಾದರೂ ಭೇಟಿ ನೀಡುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !