ಕಳೆದ 77 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಜನಸಂಖ್ಯೆ: ಚೀನಾ ಅಲ್ಲ, ಜಗತ್ತಲ್ಲಿ ಈಗ ನಾವೇ ನಂ.1!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿಯೇ ನಂ.1 ಸ್ಥಾನದತ್ತ ಹೆಜ್ಜೆಯಿಟ್ಟಿದೆ.

ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ಸ್ಥಿತಿಯ 2024 ರ ವರದಿ ಈ ಬಗ್ಗೆ ಅಂಕಿಅಂಶಗಳನ್ನು ಬಹಿರಂಗಗೊಳಿಸಿದೆ. ಭಾರತದ ಜನಸಂಖ್ಯೆ ಅಂದಾಜು 144 ಕೋಟಿ ದಾಟುತ್ತಿದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ.24ರಷ್ಟು 14ಕ್ಕಿಂತ ಕಡಿಮೆ ವಯೋಮಾನದವರು ಇರುವುದನ್ನು ಅಂಕಿಅಂಶಗಳು ಹೇಳುತ್ತಿವೆ.

2011ರ ಜನಗಣತಿಯಲ್ಲಿ 121 ಕೋಟಿ ಇದ್ದ ಭಾರತದ ಜನಸಂಖ್ಯೆ 2024ರಲ್ಲಿ 144.17ಕೋಟಿ ತಲುಪಿ ಚೀನಾದ ಜನಸಂಖ್ಯೆಯಾದ 142.5 ಕೋಟಿಯನ್ನು ಹಿಂದಿಕ್ಕಿರುವುದು ಕಂಡುಬಂದಿದೆ.

ಅಂಕಿಅಂಶಗಳ ಪ್ರಕಾರ, ದೇಶದ ಜನಸಂಖ್ಯೆಯ ಪೈಕಿ ಶೇ.17ರಷ್ಟು 10ರಿಂದ 19 ವಯಸ್ಸಿನವರು, ಶೇ.26ರಷ್ಟು 10 ರಿಂದ 24 ವಯಸ್ಸಿನವರು, ಶೇ.68ರಷ್ಟು 15 ರಿಂದ 64 ವಯೋಮಾನದವರು ದ್ದಾರೆ. 65 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನವರ ಪ್ರಮಾಣ ಶೇ.7 ಆಗಿದೆ. ಭಾರತದಲ್ಲಿ ಪುರುಷರ ಜೀವಿತಾವಧಿ ಸರಾಸರಿ 71 ವರ್ಷಗಳಾಗಿದ್ದು, ಮಹಿಳೆಯರ ಜೀವಿತಾವಧಿ 74 ವರ್ಷ ಎಂದು ವರದಿ ಹೇಳಿದೆ. ಭಾರತದ ಜನಸಂಖ್ಯೆ ಕಳೆದ 77 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದೂ ವರದಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!