ಅಧ್ಯಯನ ತಂಡಕ್ಕೆ ಶಾಕ್ ನೀಡಿದೆ ರಿಸಲ್ಟ್: ಜಗತ್ತಿನಲ್ಲಿ ಮತ್ತೆ ತಲೆಯೆತ್ತಲಿದೆ ಮಹಾಮಾರಿ ಕೋವಿಡ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತನ್ನೇ ನರಕಕೂಪಕ್ಕೆ ತಳ್ಳಿದ್ದ ಕೋವಿಡ್ ಮತ್ತೆ ಹೆಡೆಯೆತ್ತುತ್ತಿದೆಯೇ? ಹೌದೆನ್ನುತ್ತಿದೆ ಇಲ್ಲೊಂದು ಅಧ್ಯಯನ ವರದಿ. ಏಪ್ರಿಲ್ ಮೊದಲ ವಾರ ಹಾಗೂ ಎರಡನೇ ವಾರದಲ್ಲಿ ನಡೆಸಿದ ಕರೋನಾ ಪರೀಕ್ಷೆಯಲ್ಲಿ, ಪಾಸಿಟಿವ್ ಕೇಸ್‌ಗಳ ಪ್ರಮಾಣ ಶೇಕಡಾ ಏಳಕ್ಕೆ ಏರಿಕೆಯಾಗಿದೆ.

ಇದು ಕೋವಿಡ್ ಇನ್ನೂ ಜೀವಂತವಿದೆ ಮತ್ತು ಜಗತತಿಗೆ ಯಾವುದೇ ಸಂದರ್ಭದಲ್ಲಿ ಮತ್ತೆ ಶಾಕ್ ಕೊಡಲು ಸಿದ್ಧವಾಗಿದೆ ಎಂಬುದನ್ನು ಹೇಳುತ್ತಿವೆ.

ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ತಜ್ಞರು ಈ ಅಧ್ಯಯನ ನಡೆಸಿದ್ದು, ಕೊರೊನಾ ವೈರಸ್ ಮತ್ತೆ ಹರಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಬೇಸಿಗೆ ರೋಗಗಳು, ಡೆಂಗೆ ಮೊದಲಾದವುಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಅವರು ಸಲಹೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!