ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ಅನುಭವವನ್ನು ನಟಿಯರು ಬಿಚ್ಚಿಟ್ಟಿಡುತ್ತಾರೆ.
ಚಿತ್ರರಂಗದಲ್ಲಿ ನೆಲೆಯೂರಬೇಕಾದರೆ ತಮ್ಮ ಜೊತೆ ಮಲಗಲು ನೇರವಾಗಿ ಆಹ್ವಾನವಿತ್ತ ನಟರು, ನಿರ್ದೇಶಕರು, ನಿರ್ಮಾಪಕರು ಮುಂತಾದವರ ಬಗ್ಗೆ ಇದಾಗಲೇ ಹಲವರು ಮಾತನಾಡಿದ್ದು, ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
ಇದೀಗ ನಟಿ ಇಶಾ ಗುಪ್ತಾ ತಮಗಾಗಿರುವ ನೋವನ್ನು ತೋಡಿಕೊಂಡಿದ್ದಾರೆ .ಸದಾ ಬೋಲ್ಡ್ ಅಭಿನಯ ಹಾಗೂ ಹಾಟ್ ಲುಕ್ನಿಂದ ಸದ್ದು ಮಾಡ್ತಿರೋ ಬೆಡಗಿ ಇಶಾ ಗುಪ್ತಾ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದಾರೆ.
ಸ್ಪಾಟ್‌ಬಾಯ್ ಮ್ಯಾಗಝೀನ್‌ಗೆ ಅವರು ನೀಡಿರುವ ಸಂದರ್ಶನದಲ್ಲಿ ಎರಡು ಬಾರಿ ತಮಗಾಗಿರುವ ಅನುಭವವನ್ನು ಹೇಳಿಕೊಂಡಿದ್ದಾರೆ. ನಿರ್ಮಾಪಕ ಮತ್ತು ಸಹ ನಿರ್ಮಾಪಕ ಹೇಗೆ ತಮ್ಮನ್ನು ಮಂಚಕ್ಕೆ ಕರೆದರು ಅದನ್ನು ಒಪ್ಪದಿದ್ದಾಗ ಹೇಗೆ ನಡೆದುಕೊಳ್ಳಲಾಯಿತು ಎನ್ನುವುದನ್ನು ನಟಿ ಹೇಳಿದ್ದಾರೆ.
ಸಹ-ನಿರ್ಮಾಪಕರ ಮಾತನ್ನು ನಾನು ನಿರಾಕರಿಸಿದಾಗ ನನ್ನನ್ನು ಸಿನಿಮಾದಿಂದ ಹೊರ ಹಾಕಿದರು. ಇದಾದ ನಂತರ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ನನಗೆ ಅವಕಾಶ ನೀಡಲಿಲ್ಲ ಎಂದಿದ್ದಾರೆ.
ಇನ್ನೊಂದು ದಿನ, ಹೊರಾಂಗಣ ಶೂಟಿಂಗ್ ನಡೆಸಿ ಕೊಠಡಿಯಲ್ಲಿದ್ದ ವೇಳೆ ಹಲವು ಬಾರಿ ಯಾರೋ ಬಾಗಿಲು ಬಡಿದಿದ್ದರು. ನಂತರ ತೆರೆದಾಗ ನಿರ್ಮಾಪಕರು ಲೈಂಗಿಕ ಬೇಡಿಕೆ ಇಟ್ಟರು. ಈ ಘಟನೆ ನಡೆದ ಸಂದರ್ಭದಲ್ಲಿ ಒಬ್ಬಳಿಗೆ ಉಳಿದುಕೊಳ್ಳಲು ಭಯವಾಯಿತು. ಮೇಕಪ್ ಆರ್ಟಿಸ್ಟ್‌ಗೆ ಕಾಲ್ ಮಾಡಿ ನನ್ನ ರೂಂನಲ್ಲಿ ಉಳಿದುಕೊಳ್ಳಲು ತಿಳಿಸಿದೆ. ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅವರಿಂದ ಬಚಾವ್ ಆಗಲು ನಾನು ನನ್ನ ಮೇಕಪ್ ಆರ್ಟಿಸ್ಟ್‌ನನ್ನು ನನ್ನ ಕೋಣೆಯಲ್ಲಿ ಮಲಗಲು ಕರೆದೆ. ಅಂದು ಅವರ ಜೊತೆನೇ ಮಲಗಿದೆ ಎಂದು ಆ ದಿನ ನೆನಪಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಯಾವುದೇ ಹಿನ್ನೆಲೆ ಇಲ್ಲದೇ ಬಂದವರಿಗೆ ಇದು ಮಾಮೂಲು, ಸ್ಟಾರ್ ಮಕ್ಕಳ ಜೊತೆ ಅವರು ಈ ರೀತಿ ಮಾಡಲ್ಲ. ಅವರ ಅಪ್ಪ-ಅಮ್ಮನ ಭಯ ಇರುತ್ತದೆ. ಆದರೆ ನಮ್ಮಂಥವರನ್ನು ಹೇಗಾದರೂ ಬಳಸಿಕೊಳ್ಳಬಹುದು ಎಂದು ನೋಡುತ್ತಾರೆ. ಇದಕ್ಕೆ ಹಲವರು ಒಪ್ಪುತ್ತಾರೆ, ಚಿತ್ರರಂಗದಲ್ಲಿ ಸಕ್ಸಸ್ ಕಾಣಲು ಇವೆಲ್ಲಾ ಮಾಮೂಲು ಆಗಿದೆ.
ಇನ್ನು ಇಶಾ 2012ರಲ್ಲಿ ಜನ್ನತ್ 2 ಸಿನಿಮಾದ ಮೂಲಕ ಇವರು ಬಾಲಿವುಡ್‌ಗೆ ಪ್ರವೇಶಿಸಿದರು. ರಾಜ್ 3ಡಿ, ಗೋರಿ ತೇರೇ ಪ್ಯಾರ್ ಮೇನ್, ಹಮ್‌ಶಕಲ್ಸ್, ಬೇಬಿ, ರುಸ್ತುಂ, ಟೋಟಲ್ ಧಮಾಲ್, ಪಾಲ್ತಾನ್, ಬಾದ್‌ಶಾಹೋ ಇತ್ಯಾದಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.