Wednesday, June 7, 2023

Latest Posts

ಆಕಸ್ಮಿಕವಾಗಿ ತನ್ನದೇ ನೆಲದ ಮೇಲೆ ಪ್ರಬಲ ಬಾಂಬ್ ಸ್ಫೋಟಿಸಿದ ರಷ್ಯಾ ವಾಯುಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ವಾಯುಪಡೆ ಆಕಸ್ಮಿಕವಾಗಿ ತನ್ನದೇ ನಗರದ ಮೇಲೆ ಪ್ರಬಲವಾದ ಬಾಂಬ್ ಸ್ಫೋಟಿಸಿದ್ದು, ಜನರು ಭಯಭೀತರಾಗಿದ್ದಾರೆ.

ರಷ್ಯಾದ ಗಡಿ ನಗರ ಬೆಲ್ಗೊರಾಡ್ ಮೇಲೆ ಬಾಂಬ್ ದಾಳಿಯಾಗಿದ್ದು, ಉಗ್ರರು ಬಾಂಬ್ ಸಿಡಿಸಿದ್ದಾರೆ ಎಂದು ಸ್ಥಳೀಯರು ಹೆದರಿದ್ದಾರೆ.

ತಕ್ಷಣವೇ ರಷ್ಯಾಸೇನೆ ಪ್ರತಿಕ್ರಿಯೆ ನೀಡಿದ್ದು, ಆಕಸ್ಮಿಕವಾಗಿ ಬಾಂಬ್ ನಮ್ಮದೇ ನಗರದ ಮೇಲೆ ಬಿದ್ದಿದೆ ಎಂದು ಹೇಳಿದ್ದಾರೆ. ಅಪಾರ್ಟ್‌ಮೆಂಟ್ ಒಂದರ ಬಳಿ ಬಾಂಬ್ ಸ್ಫೋಟವಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಆದರೆ ಸಾಕಷ್ಟು ಆಸ್ತಿ ಹಾನಿಯಾಗಿದೆ.

ಗಡಿಯಿಂದ 25 ಮೈಲಿ ದೂರದಲ್ಲಿರುವ ಬೆಲ್ಗೊರಾಡ್ ನಗರದಲ್ಲಿ 3.4ಲಕ್ಷ ಜನರಿದ್ದಾರೆ. ಇಲ್ಲಿ ನಿರಂತರವಾಗಿ ಉಕ್ರೇನ್‌ನಿಂದ ಡ್ರೋನ್ ದಾಳಿಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಬಾಂಬ್ ಅದಕ್ಕಿಂತ ಪ್ರಬಲವಾದ ದಾಳಿಯನ್ನು ಮಾಡಿದೆ.

ಸ್ಫೋಟದ ತೀವ್ರತೆಗೆ ಕಾರು ಭೂಮಿಯಿಂದ ಅಂಗಡಿಯ ಛಾವಣಿಗೆ ಹಾರಿದೆ, ಭೂಮಿಯಲ್ಲಿ 20 ಮೀಟರ್ ಕಂದಕ ಏರ್ಪಟ್ಟಿದೆ. ಅಪಾರ್ಟ್‌ಮೆಂಟ್‌ನ ಕಿಟಕಿ ಜಖಂಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!