October 9, 2026
Friday, October 9, 2026
spot_img

ಜೂ.21ಕ್ಕೆ ಜೀ ಕನ್ನಡದಲ್ಲಿ ಬರ್ತಿದೆ ಅಪ್ಪ-ಮಗಳ ಸೆಂಟಿಮೆಂಟ್ ಕಥೆ ‘ಲವ್ ಮಾಕ್‌ಟೇಲ್ 3’.. ತಪ್ಪದೇ ವೀಕ್ಷಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿ ವಾರಾಂತ್ಯದಲ್ಲೂ ವಿಭಿನ್ನ ಮನರಂಜನೆ ನೀಡುವ ಜೀ ಕನ್ನಡ ವಾಹಿನಿ, ಇದೀಗ ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಸೂಪರ್‌ಹಿಟ್ ‘ಲವ್ ಮಾಕ್‌ಟೇಲ್ 3’ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗೆ ಸಜ್ಜಾಗಿದೆ. ಜೂನ್ 21 ರಂದು ಸಂಜೆ 4:30 ಕ್ಕೆ ಈ ಸಿನಿಮಾ ಪ್ರಸಾರವಾಗಲಿದೆ.

ಅಪ್ಪ-ಮಗಳ ಬಾಂಧವ್ಯದ ಎಮೋಷನಲ್ ಕಥೆ

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಆದಿತ್ಯ (ಆದಿ) ಮತ್ತು ಆತ ದತ್ತು ಪಡೆದ ಮಗಳು ನಿಧಿಯ ಸುಂದರ ಬಾಂಧವ್ಯದ ಕಥೆಯಿದೆ. ಜಗ್ಗಾ ಮಮ್ಮಿ ಹಾಗೂ ಗೆಳೆಯ ವಿಜಯ್ ಬೆಂಬಲದೊಂದಿಗೆ ಇವರ ಜೀವನ ಸುಖವಾಗಿ ಸಾಗುತ್ತಿರುತ್ತದೆ. ಆದರೆ, ಡಾ. ಶಾಂತಾ ಅವರು ಎಂಟ್ರಿ ಕೊಟ್ಟು, ನಿಧಿ ತನ್ನ ಸ್ವಂತ ಮೊಮ್ಮಗಳು ಎಂದು ಹೇಳಿದಾಗ ಕಥೆಗೆ ದೊಡ್ಡ ಟ್ವಿಸ್ಟ್ ಸಿಗುತ್ತದೆ.

ಪ್ರಾಣಕ್ಕಿಂತ ಹೆಚ್ಚಾದ ಮಗಳಿಗಾಗಿ ಕಾನೂನು ಹೋರಾಟ

ಅಲ್ಲಿಂದ ಆರಂಭವಾಗುವ ಕಾನೂನು ಮತ್ತು ಭಾವನಾತ್ಮಕ ಸಂಘರ್ಷ ಆದಿಯ ಬದುಕನ್ನು ಬದಲಾಯಿಸುತ್ತದೆ. ತಾನು ಪ್ರೀತಿಯಿಂದ ಸಾಕಿದ ಮಗಳನ್ನು ಉಳಿಸಿಕೊಳ್ಳಲು ಆದಿ ನಡೆಸುವ ಮನಕಲಕುವ ಹೋರಾಟವೇ ಚಿತ್ರದ ಜೀವಾಳ.

ತಾರಾಗಣ ಮತ್ತು ತಾಂತ್ರಿಕ ಶ್ರೀಮಂತಿಕೆ

ಚಿತ್ರದಲ್ಲಿ ಮಿಲನಾ ನಾಗರಾಜ್, ಸಂವೃತಾ ಸುನಿಲ್, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್ ಹಾಗೂ ಶ್ವೇತಾ ಆರ್. ಪ್ರಸಾದ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕುಟುಂಬ, ಜವಾಬ್ದಾರಿ ಮತ್ತು ನಂಬಿಕೆಯ ಮಹತ್ವ ಸಾರುವ ಈ ರೋಮಾಂಚಕ ಕೌಟುಂಬಿಕ ಡ್ರಾಮಾವನ್ನು ಮಿಸ್ ಮಾಡದೇ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ವೀಕ್ಷಿಸಿ.

Must Read