ವೈರಲ್ ವಿಡಿಯೊ: ಚೀನಾದ ಮಂದಿ ಲಾಕ್ಡೌನ್ ಸಹಿಸಲಾಗದೇ ಮಹಡಿಯಿಂದ ಬಿದ್ದು ಸಾಯ್ತಿದಾರಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಜೀರೋ ಕೋವಿಡ್ ಅರ್ಥಾತ್, ಒಂದೇ ಕೋವಿಡ್ ಕೇಸ್ ಇದ್ದರೂ ಕಠಿಣ ಲಾಕ್ಡೌನ್ ಎಂಬ ಚೀನಾದ ನಿಯಮಕ್ಕೆ ತಕ್ಕಂತೆ ಎರಡು ಕೋಟಿ ಜನಸಂಖ್ಯೆಯ ಶಾಂಘೈ ಲಾಕ್ಡೌನ್ ಆಗಿದೆ. ಆದರೆ, ಜನ ಇಂಥ ಕಠಿಣ ನಿಯಮಗಳಿಗೆ ಪ್ರತಿರೋಧ ತೋರುತ್ತಿದ್ದಾರೆ.

ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋ ಪ್ರಕಾರ ಅಪಾರ್ಟ್ಮೆಂಟ್ ಗಳಲ್ಲಿ ಬಂಧಿತವಾಗಿರುವ ಮಂದಿ, ಬದುಕಿನ ಅಸಹನೀಯತೆ ತಾಳಲಾರದೇ ಮಹಡಿ ಮೇಲಿಂದ ಹಾರಿ ಪ್ರಾಣ ಬಿಡುತ್ತಿದ್ದಾರೆ. ಇದು ನಿಜಕ್ಕೂ ಲಾಕ್ಡೌನ್ ಗೆ ಸಂಬಂಧಿಸಿದ ವಿಡಿಯೋ ಹೌದಾ, ಹೀಗೊಂದು ವಿದ್ಯಮಾನ ನಡೆಯುತ್ತಿರೋದು ಹೌದಾ ಎಂಬ ಬಗ್ಗೆ ಅಧಿಕೃತ ವರದಿಗಳಿಲ್ಲ. ಹೀಗಾಗಿ ಇದನ್ನು ದೃಢೀಕರಿಸುವುದು ಕಷ್ಟ. ಆದರೆ, ಮಾಹಿತಿಗಳನ್ನು ಬಿಟ್ಟುಕೊಡದ ಚೀನಾದ ಒಳಗೆ ಇಂಥವು ನಡೆಯುತ್ತಿರುವುದಕ್ಕೂ ಸಾಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!