ಜರ್ಮನ್ ಅಂಧ ಗಾಯಕಿಯ ಧ್ವನಿಯಲ್ಲಿ ಮೂಡಿಬಂತು ವರಾಹ ರೂಪಂ ಹಾಡು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಸಿನಿಮಾ `ಕಾಂತಾರ’. ಸಿನಿಮಾ ಹೇಗೆ ಜನರಿಗೆ ಮೆಚ್ಚಿಗೆ ಆಯಿತೋ ಹಾಗೆಯೇ ಹಾಡುಗಳು ಕೂಡ ಎಲ್ಲರ ಮನಸ್ಸಿಗೆ ತಲುಪಿತ್ತು.

ವಿಶೇಷವಾಗಿ `ವರಾಹ ರೂಪಂ’ ಎಂಬ ಹಾಡುದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಜೊತೆಗೆ ವಿವಾದಕ್ಕೂ ಗುರಿಯಾಗಿತ್ತು. ಆದರೆ ಇದೀಗ ಈ ಹಾಡು ಜನರನ್ನು ಎಷ್ಟು ಸೆಳೆದಿದ್ದೇ ಎಂದರೆ ಜರ್ಮನ್ ಅಂಧ ಗಾಯಕಿ ಈ ಹಾಡನ್ನು ಹಾಡಿದ್ದಾರೆ.

ಜರ್ಮನ್ ಖ್ಯಾತ ಗಾಯಕಿ ಕ್ಯಾಸ್ಮಾ ಅವರು ಆಗಾಗ ಬೇರೆ ಬೇರೆ ದೇಶದ ಹಾಡುಗಳನ್ನ ಹಾಡುತ್ತಿರುತ್ತಾರೆ. ಹುಟ್ಟಿನಿಂದಲೇ ಅಂಧತ್ವದೊಂದಿಗೆ ಬಾಳುತ್ತಿರುವ ಗಾಯಕಿ ಕ್ಯಾಸ್ಮಾ ಕನ್ನಡದ `ವರಾಹ ರೂಪಂ’ ಹಾಡನ್ನ ಹಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

https://www.instagram.com/accounts/login/?next=%2Fcassmaeofficial%2F&source=omni_redirect

ಸಾಮಾಜಿಕ ಜಾಲತಾಣ ಇನ್ಸ್ಟಾ ಗ್ರಾಂ ನಲ್ಲಿ ಹಾಡನ್ನು ಶೇರ್ ಮಾಡಿರುವ ಕ್ಯಾಸ್ಮಾ, ‘ನಿಮ್ಮಲ್ಲಿ ಬಹಳಷ್ಟು ಜನರು ನಾನು ಕನ್ನಡದಲ್ಲಿ ಹಾಡಬೇಕೆಂದು ಕೇಳಿದ್ದೀರಿ. ನಾನು ಹಾಡಿನ ಸಾಲುಗಳನ್ನು ಸರಿಯಾಗಿ ಹಾಡಿದ್ದೇನೆ ಎಂದುಕೊಳ್ಳುತ್ತೇನೆ. ವರಾಹ ರೂಪಂಗೆ ಸ್ಪೆಷಲ್ ಪಿಯಾನೋ ಸೌಂಡ್ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ’ ಎಂದು ಅವರು ಕ್ಯಾಪ್ಶನ್​ನಲ್ಲಿ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!