ಹಾಲಿವುಡ್‌ ಮೂವಿ ಪ್ರಿಮಿಯರ್‌ ಗೆ ಭಾರತೀಯ ಪೋಷಾಕಿನಲ್ಲಿ ಬಂದ ಸ್ಟಾರ್‌ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಇತ್ತೀಚೆಗೆ ಮುಂಬೈನಲ್ಲಿ ನಡೆದ ಹಾಲಿವುಡ್‌ ಸಿನೆಮಾದ ಪ್ರಿಮಿಯರ್‌ ಶೋವೊಂದಕ್ಕೆ ಅಪ್ಪಟ ಭಾರತೀಯ ಧಿರುಸಿನಲ್ಲಿ ಬಂದ ಸ್ಟಾರ್‌ ನಟರೊಬ್ಬರು ಸಖತ್‌ ಸುದ್ದಿಯಲ್ಲಿದ್ದಾರೆ. ದಿ ಗ್ರೇ ಮ್ಯಾನ್‌ ಚಿತ್ರದ ಮೊದಲ ಪ್ರದರ್ಶನಕ್ಕೆ ಸೌತ್‌ ಸ್ಟಾರ್‌ ಧನುಷ್‌ ಪಂಚೆಯುಟ್ಟು ಬಂದು ಎಲ್ಲರ ಗಮನ ಸೆಳೆದಿದ್ದಾರೆ.

ಈ ಸಿನೆಮಾದ ಪ್ರಿಮಿಯರ್‌ ಗೆ ಬಾಲಿವುಡ್‌ ಸೇರಿದಂತೆ ಭಾರತೀಯ ಚಿತ್ರರಂಗದ ತಾರೆಗಳೆಲ್ಲ ಜಮಾಯಿಸಿದ್ದರು ಆದರೆ ಧನುಷ್ ರ ಟ್ರೇಡಿಷನಲ್‌ ಲುಕ್ ನೆರೆದವರ ಕಣ್ಸೆಳೆಯಿತು. ಈ ಚಿತ್ರದಲ್ಲಿ ಸ್ವತಃ ಧನುಷ್‌ ಕೂಡ ನಟಿಸಿದ್ದಾರೆ.

ಬಿಳಿ ಬಣ್ಣದ ಪಂಚೆ ಹಾಗೂ ಬಿಳಿ ಬಣ್ಣದ ಶರ್ಟ್‌ ಹಾಕಿ ಬಂದ ಧನುಷ್‌ ಅವರು ನೆರೆದವರ ಗಮನವನ್ನೆಲ್ಲ ತಮ್ಮ ಕಡೆ ಸೆಳೆದಿದ್ದರು. ಅವರ ಈ ಲುಕ್‌ ಗೆ ನೆಟ್ಟಿಗರ್‌ ಜೈಕಾರ ಹಾಕುತ್ತಿದ್ದಾರೆ. ಹಾಲಿವುಡ್‌ ಸಿನೆಮಾ ಪ್ರದರ್ಶನಕ್ಕೆ ಅಪ್ಪಟ ದೇಸೀ ಉಡುಗೆ ತೊಟ್ಟು ಬಂದಿದ್ದಕ್ಕೆ ಅಭಿಮಾನಿಗಳೆಲ್ಲ ಅವರನ್ನು ಕೊಂಡಾಡುತ್ತಿದ್ದಾರೆ. ಧನುಷ್‌ ರ ಈ ಭಾರತೀಯಧಿರಿಸು ಈಗ ಎಲ್ಲಡೆ ವೈರಲ್‌ ಆಗುತ್ತಿದೆ.

ಅಂದ ಹಾಗೇ ಈ ಚಿತ್ರದಲ್ಲಿ ಧನುಷ್ ಜೊತೆಗೆ ಹಾಲಿವುಡ್ ತಾರೆಗಳಾದ ಅನಾ ಡಿ ಅರ್ಮಾಸ್, ಬಿಲ್ಲಿ ಬಾಬ್ ಥಾರ್ನ್ಟನ್, ರೆಗ್ಗೀ ಜೀನ್-ಪೇಜ್ ಮತ್ತು ಜೆಸ್ಸಿಕಾ ಹೆನ್ವಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜುಲೈ 22 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನೆಟ್‌ಫ್ಲಿಕ್ಸ್‌ನ ಅತ್ಯಂತ ದುಬಾರಿ ಚಿತ್ರ ಎಂದು ಚರ್ಚಿಸಲಾದ ಈ ಚಿತ್ರದ ಬಜೆಟ್ ಸುಮಾರು 200 ಮಿಲಿಯನ್ ಡಾಲರ್‌ಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!