ರಿಸಲ್ಟ್ ಬಂದ ಬೆನ್ನಲ್ಲೇ ಶಿಕ್ಷಕಿಗೆ ಮೆಸೇಜ್ ಮಾಡಿದ ವಿದ್ಯಾರ್ಥಿನಿ: ಥ್ಯಾಂಕ್ಸ್ ಹೇಳಿದ್ದಲ್ಲ…ಮತ್ತೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಈ ಜನ್ಮದಲ್ಲಿ ನೀನು ಉದ್ಧಾರ ಆಗಲ್ಲ ಅನ್ನೋ ಟೀಚರ್ಸ್ ಮಾತು ಸಾಮಾನ್ಯ. ಇದರಿಂದ ಸಕಾರಾತ್ಮಕ ಪರಿಣಾಮ ಬೀರಿದರೆ ಇನ್ನು ಕೆಲವೊಮ್ಮೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಯಾಕೆಂದರೆ ಈ ಮಾತಿನ ಹಿಂದೆ ಒಂದು ಒಳ್ಳಯ ಉದ್ದೇಶ ಕೂಡ ಇರುತ್ತದೆ . ಕೆಲವು ಸಲ ಆಟೀಚರ್ ಅದ್ಯಾವ ಉದ್ದೇಶ ಇಟ್ಟುಕೊಂಡು ಈ ಮಾತು ಹೇಳುತ್ತಾರೋ ಗೊತ್ತಾಗಲ್ಲ,
ಹೀಗೆ ಒಂದೆಡೆ ಶಿಕ್ಷಕಿ ವಿದ್ಯಾರ್ಥಿನಿಗೆ ನೀನು ಪಾಸ್ ಆಗಲ್ಲ. ನಿನ್ನಿಂದ ಸಾಧ್ಯಾನೇ ಇಲ್ಲ ಎಂದು ಪದೇ ಪದೇ ಆತ್ಮವಿಶ್ವಾಸ ಕುಗ್ಗಿಸುವ ಯತ್ನ ಮಾಡಿದ್ದರು. ಇದರಿಂದ ಕೋಪಿತಗೊಂಡ ವಿದ್ಯಾರ್ಥಿ ತಿರುಗೇಟು ನೀಡಿದ್ದಾಳೆ.

ನೀವು ಸಾಧ್ಯಾನೇ ಇಲ್ಲ ಎಂದಿದ್ದೀರಿ, ನಾನು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದೇನೆ. ನನಗೆ ಆಡಿದ ಮಾತುಗಳನ್ನು ಬೇರೆ ವಿದ್ಯಾರ್ಥಿಗಳಿಗೆ ಹೇಳಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾಳೆ.

ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತನ್ನ ಮನಸ್ಸಿನಲ್ಲಿದ್ದ ಸಿಟ್ಟನ್ನು ವ್ಯಾಟ್ಸ್ಆ್ಯಪ್ ಮೂಲಕ ಸಂದೇಶ ರವಾನಿಸಿ ಹೊರಹಾಕಿದ್ದಾಳೆ. ಈ ಮೆಸೇಜ್ ಇದೀಗ ವೈರಲ್ ಆಗಿದೆ.

 

ಮೆಸೇಜ್​ನಲ್ಲಿ ಏನಿದೆ?
ನಾನು 2019-20ರ ಸಾಲಿನಲ್ಲಿದ್ದ 10ನೇ ವಿದ್ಯಾರ್ಥಿನಿ. ನಿಮ್ಮ ವಿದ್ಯಾರ್ಥಿನಿಯಾಗಿದ್ದೆ. ನಾನು ಸಂದೇಶವನ್ನು ಯಾಕೆ ಕಳುಹಿಸುತ್ತಿದ್ದೇನೆ ಎಂದರೆ, ನೀವು ಆಡಿದ ಮಾತುಗಳಿಗಾಗಿ. ನಿನ್ನಿಂದ ಸಾಧ್ಯವೇ ಇಲ್ಲ, ನೀನು ಪಾಸ್ ಆಗಲ್ಲ. ನೀನು ಏನು ಆಗಬೇಕು ಅಂದುಕೊಡ್ಡಿದಿಯೋ ಅದು ನಿನ್ನಿಂದ ಸಾಧ್ಯವಿಲ್ಲ ಎಂದು ಪದೇ ಪದೆ ಚುಚ್ಚು ಮಾತುಗಳಿಂದ ನನ್ನ ಆತ್ಮವಿಶ್ವಾಸ ಕುಗ್ಗಿಸಿದ್ದೀರಿ. ನನ್ನನ್ನು ಹೀಯಾಳಿಸಿದ್ದೀರಿ. ಪ್ರತಿ ಹೆಜ್ಜೆಗೂ ನನ್ನನ್ನ ಕೆಳಮಟ್ಟಕ್ಕೆ ತಳ್ಳೀದ್ದೀರಿ. ಆದರೆ ಇವತ್ತು ನಾನು 12ನ ತರಗತಿ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದೇನೆ. ಇದೀಗ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದಿದ್ದೇನೆ. ನಾನು ಏನು ಓದಬೇಕು, ಏನು ಆಗಬೇಕು ಅಂದುಕೊಂಡಿದ್ದೇನೋ ಅದೆ ವಿಷಯವನ್ನು ಆರಿಸಿಕೊಂಡಿದ್ದೇನೆ. ಇದು ನಿಮಗೆ ಧನ್ಯವಾದ ಹೇಳುವ ಸಂದೇಶವಲ್ಲ. ನಾನು ಏನು ಅನ್ನೋದನ್ನು ತೋರಿಸಿಕೊಟ್ಟಿದ್ದೇನೆ. ಮುಂದಿನ ಬಾರಿ ವಿದ್ಯಾರ್ಥಿಗಳ ಮೇಲೆ ದಯೆ ತೋರಿಸಿದೆ. ನಿಮ್ಮ ಸಹಕಾರ ಕೇಳುವ ವಿದ್ಯಾರ್ಥಿಗಳಿಗೆ ನೆರವು ನೀಡಿ ಎಂದು ವಿದ್ಯಾರ್ಥಿನಿ ಶಿಕ್ಷಕಿಗೆ ಸಂದೇಶ ಕಳುಹಿಸಿದ್ದಾಳೆ.

ಈ ಚಿತ್ರ ಇದೀಗ ವೈರಲ್ ಆಗಿದ್ದು, ಜನರು ಯುವತಿಯ ಬೆಂಬಲಕ್ಕೆ ನಿಂತಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!