ಈ ಶತಮಾನದ ಅಂಚಿನಲ್ಲಿ 80 ಶೇ. ಹಿಮನದಿಗಳು ನಾಶವಾಗಲಿವೆ ಎನ್ನುತ್ತಿದೆ ಅಧ್ಯಯನ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಪಂಚದಲ್ಲಿ ಇಂದು ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚಿದ್ದು ಇವುಗಳ ದಹನದಿಂದ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳು ವಾತಾವರಣ ಸೇರಿ ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗುತ್ತಿವೆ. ಪಳೆಯುಳಿಕೆ ಇಂಧನಗಳ ಬಳಕೆ ಇದೇ ರೀತಿಯಾಗಿ ಮುಂದುವರೆದರೆ ಈ ಶತಮಾನದ ಕೊನೆಯ ವೇಳೆಗೆ ಪ್ರಪಂಚದ 80 ಶೇಕಡಾದಷ್ಟು ಹಿಮ ನದಿಗಳು ಕಣ್ಮರೆಯಾಗಲಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಅಮೆರಿಕದ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದ ಸಿವಿಲ್ ಮತ್ತು ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್‌ನ ಸಹಾಯಕ ಪ್ರೊಫೆಸರ್ ಡೇವಿಡ್ ರೌನ್ಸ್, ಅಧ್ಯಯನದ ಪ್ರಕಾರ ಪಳೆಯುಳಿಕೆ ಇಂಧನಗಳ ಬಳಕೆ ಇದೇರೀತಿ ಮುಂದುವರೆದರೆ 5 ರಲ್ಲಿ4 ಭಾಗದಷ್ಟು ಹಿಮನದಿಗಳು ಮರೆಯಾಗುತ್ತವೆ. ಪ್ರಪಂಚದಲ್ಲಿರುವ ಒಟ್ಟಾರೆ ಹಿಮರಾಶಿಯಲ್ಲಿ 41 ಶೇಕಡಾದಷ್ಟು ಕರಗಿ ಹೋಗಲಿದೆ. ಒಂದು ವೇಳೆ ಇಂದನ ದಹನ ಪ್ರಮಾಣ ಕಡಿಮೆಯಾದರೂ 26 ಶೇಕಡಾದಷ್ಟು ಹಿಮರಾಶಿ ಕರಗಲಿದೆ ಎಂದು ಅವರು ತಮ್ಮ ಅಧ್ಯಯನದಲ್ಲಿ ವಿವರಿಸಿದ್ದಾರೆ.

ಪಳೆಯುಳಿಕೆ ಇಂಧನಗಳ ಬಳಕೆ ಕಡಿಮೆ ಮಾಡಿ ಇಂಗಾಲ ಹೆಜ್ಜೆಗಳನ್ನು ಕಡಿಮೆ ಮಾಡಲು ಪ್ರಸ್ತುತ ಜಾಗತಿಕವಾಗಿ ನಡೆಯುತ್ತಿರುವ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆಫ್ ಪಾರ್ಟಿಸ್ (COP 27) ನಂತಹ ಪ್ರಯತ್ನಗಳನ್ನು ಆಧರಿಸಿ ಹೊರಸೂಸುವಿಕೆಯು ಕಡಿಮೆಯಾದರೂ 25 ಶೇಕಡಾದಷ್ಟು ಹಿಮನದಿಗಳು ಕಡಿಮೆಯಾಗಲಿವೆ. ಸಂಖ್ಯೆಗಳಲ್ಲಿ ಹೇಳುವುದಾದರೆ 50ಕ್ಕೂ ಹೆಚ್ಚು ಹಿಮನದಿಗಳು ಕಾಣೆಯಾಗಲಿವೆ ಎಂದು ಅವರ ಅಧ್ಯಯನ ವರದಿ ಹೇಳಿದೆ. ಏಕೆಂದರೆ ಈಗಾಗಲೇ ವಾತಾವರಣದಲ್ಲಿ ಬಿಡುಗಡೆಯಾಗಿರುವ ಹಸಿರುಮನೆ ಅನಿಲಗಳ ಪ್ರಮಾಣ ಸಾಕಷ್ಟಿದೆ. ಅವುಗಳಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಪಳೆಯುಳಿಕೆ ಇಂಧನಗಳ ದಹನ ಪ್ರಮಾಣ ಕಡಿಮೆಯಾದರೂ ಈ ಶತಮಾನದ ಅಂಚಿನವರೆಗೂ ಪ್ರಭಾವ ಬೀರಲಿವೆ ಎಂದು ಅಂದಾಜಿಸಲಾಗಿದೆ.  ಅವುಗಳ ನಷ್ಟವು ಸ್ಥಳೀಯ ಜಲವಿಜ್ಞಾನ, ಪ್ರವಾಸೋದ್ಯಮ, ಹಿಮನದಿ ಅಪಾಯಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಅಧ್ಯಯನವು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!