ಬಡವರ ಪರ, ಬಡರ ರಕ್ಷಕ ಎನ್ನುವ ರಾಹುಲ್ ಗಾಂಧಿ ಯಾತ್ರೆಯಲ್ಲಿ ಧರಿಸಿರುವ ಟಿ-ಶರ್ಟ್‌ ಬೆಲೆ 41 ಸಾವಿರ: ಬಿಜೆಪಿ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ದುಬಾರಿ ಬೆಲೆಯ ಟಿ-ಶರ್ಟ್‌ ಬಗ್ಗೆ ಬಿಜೆಪಿ ಟೀಕೆ ಮಾಡಿದೆ.

ತಾನು ಬಡವರ ಪರ, ಬಡ ಜನರ ರಕ್ಷಕ ಎಂದು ಹೇಳುವ ರಾಹುಲ್‌ ಗಾಂಧಿ, ಭಾರತ್‌ ಜೋಡೋ ಯಾತ್ರೆಯ ವೇಳೆ ಧರಿಸಿರುವ ಟಿ-ಶರ್ಟ್‌ನ ಬೆಲೆ 41,257 ರೂಪಾಯಿ ಎಂದು ಬಿಜೆಪಿ ಟ್ವೀಟ್‌ ಮಾಡಿದೆ. ಇದಕ್ಕೆ ಭಾರತ್‌ ದೇಖೋ ಎಂದೂ ಶೀರ್ಷಿಕೆಯನ್ನೂ ನೀಡಿದೆ.
ಇನ್ನು ಬಿಜೆಪಿಯ ಈ ಟ್ವೀಟ್‌ಗೆ ಇಡೀ ಕಾಂಗ್ರೆಸ್‌ ವಕ್ತಾರರು ಹಾಗೂ ರಾಜಕಾರಣಿಗಳ ಮುಗಿಬಿದ್ದಿದೆ.

ಯಾತ್ರೆ ಆರಂಭಿಸುವ ವೇಳೆ ರಾಹುಲ್ ಗಾಂಧಿ ಬಿಳಿ ಬಣ್ಣದ ಟೀ ಶರ್ಟ್, ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಈ ಪ್ರಯಾಣಕ್ಕಾಗಿ ರಾಹುಲ್ ಗಾಂಧಿ ಎರಡು ಜೊತೆ ಶೂಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅವರು ಗುರುವಾರ ಧರಿಸಿದ್ದ ಶೂಗಳು ‘ಆಸಿಕ್ಸ್’ ಬ್ರಾಂಡ್‌ನ ಕ್ರೀಡಾ ಶೂಗಳಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದರ ಬೆನ್ನಲ್ಲಿಯೇ ರಾಹುಲ್‌ ಗಾಂಧಿ ಧರಿಸಿದ್ದ ಟಿ-ಶರ್ಟ್‌ನ ಮೌಲ್ಯವನನ್ನು ಬಿಜೆಪಿ ಪಕ್ಷವು ಕೆದಕಿ ಟ್ವೀಟ್‌ ಮಾಡಿದೆ. ರಾಹುಲ್ ಧರಿಸಿದ ಟಿ-ಶರ್ಟ್‌ ಬರ್‌ಬೆರಿ ಕಂಪನಿಯದ್ದಾಗಿದೆ. ಈ ಒಂದು ಟಿಶರ್ಟ್‌ನ ಮೌಲ್ಯವೇ 41, 257 ರೂಪಾಯಿ ಎಂದು ಟ್ವೀಟ್‌ ಮಾಡಿದೆ.

ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶಾದ್ಯಂತ ಪಾದಯಾತ್ರೆಯನ್ನು ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದೆ. ರಾಹುಲ್ ಗಾಂಧಿ, ಪಕ್ಷದ ಹಲವಾರು ನಾಯಕರೊಂದಿಗೆ ಗುರುವಾರ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!