ತೆರಿಗೆ ಲೆಕ್ಕಪರಿಶೋಧನಾ ವರದಿ ಸಲ್ಲಿಸಲು ಅಕ್ಟೋಬರ್ 7 ರವರೆಗೆ ಗಡುವನ್ನು ವಿಸ್ತರಿಸಿದ ತೆರಿಗೆ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆದಾಯ ತೆರಿಗೆ ಇಲಾಖೆಯು 2021-22ನೇ ಹಣಕಾಸು ವರ್ಷಕ್ಕೆ ತೆರಿಗೆ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸುವ ಗಡುವನ್ನು ಒಂದು ವಾರಗಳವರೆಗೆ ವಿಸ್ತರಿಸಿದ್ದು ಅಂತಿಮ ದಿನಾಂಕವನ್ನು ಅಕ್ಟೋಬರ್‌ 7ರವೆರೆಗೆ ವಿಸ್ತರಣೆ ಮಾಡಲಾಗಿದೆ.

“2022-23ರ ಮೌಲ್ಯಮಾಪನ ವರ್ಷಕ್ಕೆ ಲೆಕ್ಕಪರಿಶೋಧನೆಯ ವಿವಿಧ ವರದಿಗಳನ್ನು ಸಲ್ಲಿಸುವಲ್ಲಿ ತೆರಿಗೆದಾರರು ಮತ್ತು ಇತರ ಮಧ್ಯಸ್ಥಗಾರರು ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಲೆಕ್ಕಪರಿಶೋಧನೆಯ ವಿವಿಧ ವರದಿಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು ಅಕ್ಟೋಬರ್ 7, 2022 ರವರೆಗೆ, ವಿಸ್ತರಿಸಲು ನಿರ್ಧರಿಸಿದೆ. ” ಅಧಿಕೃತ ಹೇಳಿಕೆ ತಿಳಿಸಿದೆ.

ಆದಾಯ ತೆರಿಗೆ ಕಾಯ್ದೆಯಡಿ, ಚಾರ್ಟರ್ಡ್ ಅಕೌಂಟೆಂಟ್‌ನಿಂದ ತಮ್ಮ ಖಾತೆಗಳನ್ನು ಆಡಿಟ್ ಮಾಡಬೇಕಾದ ತೆರಿಗೆದಾರರು ಈ ಹಿಂದೆ ಸೆಪ್ಟೆಂಬರ್ 30 ರೊಳಗೆ ತೆರಿಗೆ ಲೆಕ್ಕಪರಿಶೋಧನಾ ವರದಿಯನ್ನು ಐಟಿ ಇಲಾಖೆಗೆ ಸಲ್ಲಿಸಬೇಕಾಗಿತ್ತು ಪ್ರಸ್ತುತ ಈ ಅವಧಿಯನ್ನು ಅಕ್ಟೋಬರ್‌ 7 ರವೆರೆಗೆ ಹೆಚ್ಚಿಸಿ ವರದಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!